ಬೆಂಗಳೂರು : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ 2024-25ನೇ ಸಾಲಿನ ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯಗಳಿಗಾಗಿ ಪರಿಶಿಷ್ಟ ಪಂಗಡದ ಸಮುದಾಯ ಜನಾಂಗದ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಬೆಂಗಳೂರು ಓನ್, ಕರ್ನಾಟಕ ಓನ್, ಗ್ರಾಮ ಓನ್ ಸೆಂಟರ್‌ಗಳ ಮೂಲಕ (https://sevasindhuservices.karnataka.gov.in) ಗೆ ಭೇಟಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ನ.23 ಕೊನೆಯ ದಿನವಾಗಿದೆ.
ಯೋಜನೆಗಳು
ನೇರಸಾಲ ಯೋಜನೆ:
ಕಿರು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಘಟಕವೆಚ್ಚ ರೂ.1 ಲಕ್ಷ ಇದರಲ್ಲಿ ರೂ.50,000 ಸಹಾಯಧನ ಮತ್ತು ರೂ.50,000 ಸಾಲ)
ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ:
ವ್ಯಾಪಾರ ಮತ್ತು ಇತರೆ ಸಣ್ಣ ಉದ್ಯಮಗಳಿಗಾಗಿ ಘಟಕ ವೆಚ್ಚದ ಶೇ.70 ರಷ್ಟು ಅಥವಾ ಗರಿಷ್ಟ ರೂ.2 ಲಕ್ಷ ಸಹಾಯಧನ ಮತ್ತು ಉಳಿದ ಬ್ಯಾಂಕ್ ಸಾಲ.
ಸ್ವಾವಲಂಭಿ ಸಾರಥಿ:
ಸರಕು ವಾಹನ/ಟ್ಯಾಕ್ಸಿ ಉದ್ದೇಶಕ್ಕಾಗಿ ಘಟಕ ವೆಚ್ಚದ ಶೇ.75 ರಷ್ಟು ಅಥವಾ ಗರಿಷ್ಟ ರೂ.4 ಲಕ್ಷ ಸಹಾಯಧನ ಮತ್ತು ಉಳಿದ ಬ್ಯಾಂಕ್ ಸಾಲ/ಫಲಾನುಭವಿಯ ವಂತಿಕೆ.
ಮೈಕ್ರೋಕ್ರೆಡಿಟ್ (ಪ್ರೇರಣಾ) ಯೋಜನೆ:
ಮಹಿಳಾ ಸ್ವಸಹಾಯ ಸಂಘದ ಕನಿಷ್ಠ 10 ಜನ ಸದಸ್ಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಕಿರು ಆರ್ಥಿಕ ಚಟುವಟಿಕೆಗಳಿಗೆ ಘಟಕ ವೆಚ್ಚ ರೂ.2.50 ಲಕ್ಷ, ಇದರಲ್ಲಿ ರೂ.1.50 ಲಕ್ಷ ಸಹಾಯಧನ ಮತ್ತು ರೂ.1 ಲಕ್ಷ ನಿಗಮದಿಂದ ಸಾಲ ಕಲ್ಪಿಸಲಾಗುವುದು.
ಗಂಗಾ ಕಲ್ಯಾಣ ಯೋಜನೆ:
ಸಣ್ಣ ಮತ್ತು ಅತಿ ಸಣ್ಣ ರೈತರು ಹೊಂದಿರುವ ಖುಷ್ಕಿ, ಒಣ ಜಮೀನಿನಲ್ಲಿ ಕೊಳವೆಬಾವಿ ಕೊರೆಸಿ, ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಈ ಯೋಜನೆಗೆ ಘಟಕವೆಚ್ಚ ರೂ.3.75 ಲಕ್ಷ (ರೂ.50,000 ಸಾಲ ಒಳಗೊಂಡಂತೆ).ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಸಂಪರ್ಕಿಸಬಹುದು ಎಂದು ನಿಗಮದ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.