alex Certify ಸುಲಭವಾಗಿ ಮಾಡಿ ಗೋವಾ ಸ್ಪೆಷಲ್ ಫಿಶ್ ಕರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಲಭವಾಗಿ ಮಾಡಿ ಗೋವಾ ಸ್ಪೆಷಲ್ ಫಿಶ್ ಕರಿ

ಮೀನಿನ ಖಾದ್ಯಗಳು ಅನೇಕರಿಗೆ ಅಚ್ಚುಮೆಚ್ಚು. ಸುಲಭವಾಗಿ ಮಾಡಬಹುದಾದ ಗೋವಾ ಫಿಶ್ ಕರಿಯ ಮಾಹಿತಿ ಇಲ್ಲಿದೆ.

ಬೇಕಾಗುವ ಪದಾರ್ಥ:

1 ಮಧ್ಯಮ ಗಾತ್ರದ ಪಾಂಫ್ರೆಟ್, 1 ದೊಡ್ಡ ಈರುಳ್ಳಿ ಹೆಚ್ಚಿದ್ದು, 1 ತೆಂಗಿನ ಕಾಯಿ ಗಟ್ಟಿ ಹಾಲು, ಅರ್ಧ ಕಪ್ ಹುಣಸೆ ಹಣ್ಣಿನ ರಸ, ರುಚಿಗೆ ತಕ್ಕಷ್ಟು ಉಪ್ಪು.

ರುಬ್ಬಿಕೊಳ್ಳಲು ಬೇಕಾದ ಸಾಮಗ್ರಿ:

¼ ತೆಂಗಿನ ಕಾಯಿ, ½ ಸ್ಪೂನ್ ಕರಿಮೆಣಸು, 1 ಟೀ ಸ್ಪೂನ್ ಧನಿಯಾ, 1 ಟೀ ಸ್ಪೂನ್ ಜೀರಿಗೆ, ಬೀಜ ತೆಗೆದ 10 ಕೆಂಪು ಮೆಣಸಿನ ಕಾಯಿ, 2 ಬೆಳ್ಳುಳ್ಳಿ.

ತಯಾರಿಸುವ ವಿಧಾನ:

ಪಾತ್ರೆಯೊಂದರಲ್ಲಿ ರುಬ್ಬಿದ ಮಸಾಲೆ, ಈರುಳ್ಳಿ, ಉಪ್ಪು ಹಾಕಿರಿ. 2 ಕಪ್ ನೀರನ್ನು ಹಾಕಿ ಸಣ್ಣ ಉರಿಯಲ್ಲಿ ಈರುಳ್ಳಿ ಬೇಯುವ ತನಕ ಬೇಯಿಸಿ.

ಅದಕ್ಕೆ ತೆಂಗಿನ ಹಾಲು ಹಾಕಿ ಉರಿ ಜಾಸ್ತಿ ಮಾಡಿ ಕುದಿಸಿರಿ. ಬಳಿಕ ಉರಿ ಕಡಿಮೆ ಮಾಡಿಕೊಳ್ಳಿ. ಹುಣಸೆ ಹಣ್ಣಿನ ರಸವನ್ನು ಹಾಕಿ ಮತ್ತೆ 5 ನಿಮಿಷ ಬೇಯಿಸಿ.

ಕೊನೆಗೆ ಕ್ಲೀನ್ ಮಾಡಿಟ್ಟುಕೊಂಡ ಮೀನು ಹಾಕಿ ಬೇಯಿಸಿ, ಬೆಂದ ಬಳಿಕ ಕೆಳಗಿಳಿಸಿ ರುಚಿಯನ್ನು ಸವಿಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...