ತೆರಿಗೆಯಲ್ಲಿ ಕರ್ನಾಟಕಕ್ಕೆ ನ್ಯಾಯವಾಗಿ ಸಲ್ಲಬೇಕಾದ ಪಾಲು ಸಿಗುತ್ತಿಲ್ಲವೆಂಬ ಮಾತು ಬಹು ಕಾಲದಿಂದಲೂ ಕೇಳಿ ಬರುತ್ತಿದೆ. ತೆರಿಗೆ ಸಂಗ್ರಹಣೆಯಲ್ಲಿ ಮಹಾರಾಷ್ಟ್ರದ ಬಳಿಕ ಕರ್ನಾಟಕ ನಂತರದ ಸ್ಥಾನದಲ್ಲಿದ್ದು, ಆದರೆ ಪಾಲು ನೀಡುವಾಗ ಕೇಂದ್ರ ಸರ್ಕಾರ ಕಡೆಗಣಿಸುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಈ ಹಿಂದಿನಿಂದಲೂ ಪ್ರತಿಪಾದಿಸಿಕೊಂಡು ಬಂದಿದ್ದು, ಇದೀಗ ಕೇಂದ್ರದ ವಿರುದ್ದ ಹೋರಾಟ ಮಾಡುವಂತೆ ಕರೆ ನೀಡಿದೆ.
ಈ ನಿಟ್ಟಿನಲ್ಲಿ ಕಾಂಗ್ರೆಸ್ ಟ್ವೀಟ್ ಮಾಡಿದ್ದು,
ಎದ್ದೇಳಿ ಕನ್ನಡಿಗರೇ!
ಬೆವರು ಸುರಿಸಿ ದುಡಿದ ಕನ್ನಡಿಗರಿಗೆ ಅರೆಕಾಸಿನ ಮಜ್ಜಿಗೆ!
ರೋಗಗ್ರಸ್ತ ಉತ್ತರ ಭಾರತದ ರಾಜ್ಯಗಳಿಗೆ ಹಬ್ಬದ ಸಜ್ಜಿಗೆ!
ರಾಜ್ಯದಿಂದ ಆಯ್ಕೆಯಾಗಿ ಕೇಂದ್ರದ ದಾಸರಾಗಿರುವ 18 NDA ಸಂಸದರು, ಈ ಅನ್ಯಾಯ ಕಂಡರೂ ಕಾಣದಂತೆ ಬಾಯಿಗೆ ಬೀಗ ಜಡಿದುಕೊಂಡು ಕೂತಿದ್ದಾರೆ.
ಕನ್ನಡಿಗರನ್ನು ಗುಲಾಮರಂತೆ ಕಾಣುವ ಮನಸ್ಥಿತಿಯ ಬಿಜೆಪಿಯನ್ನು ಗೆಲ್ಲಿಸಿದ್ದಕ್ಕೆ ಸಿಕ್ಕ ಫಲ ಇದೆ.
ಕನ್ನಡಿಗರು ಈಗಲೂ ಧ್ವನಿ ಎತ್ತದಿದ್ದರೆ, ಇಡೀ ರಾಜ್ಯವನ್ನೇ ಉತ್ತರ ಭಾರತದ ಗುಲಾಮಗಿರಿಗೆ ಇಟ್ಟುಕೊಳ್ಳುವುದರಲ್ಲಿ ಅನುಮಾನವಿಲ್ಲ.
ಅನ್ಯಾಯದ ವಿರುದ್ಧ ಧ್ವನಿ ಎತ್ತೋಣ, ಸ್ವಾಭಿಮಾನ ಉಳಿಸಿಕೊಳ್ಳೋಣ! ಎಂದು ಕರೆ ನೀಡಿದೆ.