alex Certify ALERT : ಮಹಿಳೆಯರೇ ಎಚ್ಚರ : ಅಪರಿಚಿತ ವಾಹನಗಳಿಂದ ‘ಲಿಫ್ಟ್’ ಪಡೆಯುವ ಮುನ್ನ ಈ ಸುದ್ದಿ ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ALERT : ಮಹಿಳೆಯರೇ ಎಚ್ಚರ : ಅಪರಿಚಿತ ವಾಹನಗಳಿಂದ ‘ಲಿಫ್ಟ್’ ಪಡೆಯುವ ಮುನ್ನ ಈ ಸುದ್ದಿ ಓದಿ

ಹಾಸನ : ವಾಹನದಲ್ಲಿ ಲಿಫ್ಟ್ ಕೊಡಿಸುವುದಾಗಿ ನಂಬಿಸಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ಹಾಸನದ ಬೇಲೂರಿನಲ್ಲಿ ನಡೆದಿದೆ.

ಬಂಧಿತನನ್ನು ಬೇಲೂರು ಸಮೀಪದ ಜೆ.ಸುರಪುರ ನಿವಾಸಿ ಕೇಶವಮೂರ್ತಿ ಎಂದು ಗುರುತಿಸಲಾಗಿದೆ. ಸಂತ್ರಸ್ತೆ ನಾಲ್ಕು ತಿಂಗಳ ಹಿಂದೆ ಬೇಲೂರಿಗೆ ಆರ್ ಎಂಸಿಯಲ್ಲಿ ಶುಂಠಿ ತೊಳೆಯುವ ಘಟಕದಲ್ಲಿ ಕೆಲಸ ಮಾಡಲು ಬಂದಿದ್ದರು.

ಸೆಪ್ಟೆಂಬರ್ 30 ರಂದು, ಕೆಲಸಕ್ಕೆ ಹೋಗಲು ಬಸ್ ‍ಗಾಗಿ ಕಾಯುತ್ತಿದ್ದ ವೇಳೆ ಸಂತ್ರಸ್ತ ಮಹಿಳೆಗೆ ಆರೋಪಿ ತನ್ನ ಬೈಕಿನಲ್ಲಿ ಲಿಫ್ಟ್ ನೀಡಿದ್ದರು. ಮಹಿಳೆ ಬೈಕ್ ಹತ್ತಿದಾಗ, ಅವನು ಹತ್ತಿರದ ಜೋಳದ ಹೊಲಕ್ಕೆ ಕರೆದುಕೊಡು ಅವಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.ಈ ಸಂಬಂಧ ಸಂತ್ರಸ್ತೆ ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...