alex Certify ಈ ಜಿಲ್ಲೆಯ ವಾಹನ ಮಾಲೀಕರ ಗಮನಕ್ಕೆ : ತೆರಿಗೆ ಪಾವತಿಸುವಂತೆ ಸೂಚನೆ |Vehicle Tax | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಜಿಲ್ಲೆಯ ವಾಹನ ಮಾಲೀಕರ ಗಮನಕ್ಕೆ : ತೆರಿಗೆ ಪಾವತಿಸುವಂತೆ ಸೂಚನೆ |Vehicle Tax

ಬಳ್ಳಾರಿ : ಜಿಲ್ಲೆಯ ಬಳ್ಳಾರಿ, ಸಿರುಗುಪ್ಪ, ಕಂಪ್ಲಿ, ಕುರುಗೋಡು ಮತ್ತು ಸಂಡೂರು ತಾಲ್ಲೂಕುಗಳಲ್ಲಿ ಬರುವ ಸಾರಿಗೆ ಹಾಗೂ ಸಾರಿಗೇತರ ವಾಹನಗಳ ಮಾಲೀಕರು ತಮ್ಮ ವಾಹನಗಳ ತೆರಿಗೆಯನ್ನು ಕೂಡಲೇ ಪಾವತಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ.ಎಸ್.ಶ್ರೀನಿವಾಸ ಗಿರಿ ಅವರು ತಿಳಿಸಿದ್ದಾರೆ.

ತೆರಿಗೆ ಬಾಕಿಯಿರುವ ವಾಹನಗಳ ಮಾಲೀಕರಿಗೆ ಈಗಾಗಲೇ ಅಂಚೆ ಮೂಲಕ ನೋಟಿಸ್ ಕಳುಹಿಸಲಾಗಿದೆ. ನೋಟಿಸ್ ತಲುಪಿದ ತಕ್ಷಣ ವಾಹನದ ಮಾಲೀಕರು ಪ್ರಾದೇಶಿಕ ಸಾರಿಗೆ ಕಚೇರಿಗೆ ಹಾಜರಾಗಿ ತೆರಿಗೆ ಪಾವತಿಸಬೇಕು.

ತಪ್ಪಿದಲ್ಲಿ ಮೋಟಾರು ವಾಹನ ಕಾಯ್ದೆ ಮತ್ತು ಅದರ ಅಡಿ ಬರುವ ನಿಯಮಗಳನುಸಾರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು ಮತ್ತು ವಾಹನಗಳ ತನಿಖಾ ಸಮಯದಲ್ಲಿ ವಾಹನವು ಕಂಡು ಬಂದಲ್ಲಿ ಜಪ್ತಿ ಮಾಡಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.ಅದೇ ರೀತಿಯಾಗಿ 15 ವರ್ಷಗಳ ಅವಧಿ ಪೂರೈಸಿರುವ ಅಟೋರಿಕ್ಷಾ, ಶಾಲಾ ವಾಹನ ಮತ್ತು ಇನ್ನಿತರ ಪ್ರಯಾಣಿಕ ವಾಹನಗಳ ನೋಂದಣಿ ರದ್ದು ಪಡಿಸಿಕೊಂಡು, ಸ್ಕಾçಪ್ ಮಾಡಿಕೊಳ್ಳಬೇಕು ಎಂದೂ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ.ಎಸ್.ಶ್ರೀನಿವಾಸ ಗಿರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...