ಬೆಂಗಳೂರು : ‘ವೀರ ಸಾರ್ವಕರ್ ಮಾಂಸ ತಿನ್ನುತ್ತಿದ್ದರು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದು, ವಿವಾದ ಸೃಷ್ಟಿಸಿದೆ.
ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ವೀರ್ ಸಾರ್ವಕರ್ ಬ್ರಾಹಣ ಸಮುದಾಯದವರು ಅವರು ಕೂಡ ಮಾಂಸಾಹಾರ ಸೇವಿಸುತ್ತಿದ್ದರು. ಈ ಮೂಲಕ ಅವರೊಬ್ಬ ಮಾರ್ಡನಿಸ್ಟ್ ಆಗಿದ್ದರು ವೀರ್ ಸಾರ್ವಕರ್ ಮೂಲಭೂತವಾದಿ ಆಗಿದ್ದರು. ಎಂದು ಹೇಳಿಕೆ ನೀಡಿದ್ದಾರೆ.
ಮಹಾತ್ಮ ಗಾಂಧೀಜಿಯವರು ಸಸ್ಯಹಾರಿ ಆಗಿದ್ದರು. ನಮ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದರುದೇಶದಲ್ಲಿಂದು ದೊಡ್ಡ ಸಂಪ್ರದಾಯವಾದಿಗಳಿದ್ದಾರೆ. ಆದರೆ ಸಂಪ್ರದಾಯವಾದಿಗಳಲ್ಲ, ಮೂಲಭೂತವಾದಿಗಳೂ ಅಲ್ಲ. ಇದನ್ನು ನಾವು ತಿಳಿದುಕೊಳ್ಳಬೇಕು ಎಂದರು.ವೀರ ಸಾರ್ವಕರ್ ಮಾಂಸ ತಿನ್ನುತ್ತಿದ್ದರು’ ಎಂಬ ದಿನೇಶ್ ಗುಂಡೂರಾವ್ ಹೇಳಿಕೆ ವಿವಾದ ಸೃಷ್ಟಿಸಿದೆ. ವೀರ್ ಸಾರ್ವಕರ್ ಬಗ್ಗೆ ಹಗುರವಾಗಿ ಮಾತನಾಡಿರುವ ದಿನೇಶ್ ಗುಂಡೂರಾವ್ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.