ಬೆಂಗಳೂರು : ಬೆಂಗಳೂರಿನ ಅನೇಕಲ್ ನಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು,1 ದಿನದ ಗಂಡು ಮಗುವನ್ನು ಮಣ್ಣಿನಲ್ಲಿ ಹೂತು ಹಾಕಿದ ಘಟನೆ ನಡೆದಿದೆ.
ನೆರಿಗಾ ಸಮೀಪದ ಕತ್ರಿಗುಪ್ಪೆ ದಿಣ್ಣೆಯಲ್ಲಿರುವ ನಿರ್ಜನ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬಹಿರ್ದೆಸೆಗೆ ಹೋದವರು ಮಗುವನ್ನು ಗಮನಿಸಿ ಕೂಡಲೇ ರಕ್ಷಿಸಿದ್ದಾರೆ.ಮಗುವಿನ ಚೀರಾಟ ಕೇಳಿದ ವ್ಯಕ್ತಿ ಮಗುವನ್ನು ರಕ್ಷಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮಗುವನ್ನು ದೊಮ್ಮಸಂದ್ರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಗು ಚೇತರಿಸಿಕೊಳ್ಳುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಗು ಯಾರಿಗೆ ಸೇರಿದ್ದು..? ಪೋಷಕರು ಯಾರು ಎಂಬುದು ಇನ್ನೂ ತಿಳಿದು ಬಂದಿಲ್ಲ.ರಾಜ್ಯದಲ್ಲಿ ಭ್ರೂಣ ಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಈ ಅಮಾನವೀಯ ಘಟನೆ. ಮಗು ಬೇಡ ಎಂದು ಪೋಷಕರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.