ಬೆಂಗಳೂರು : ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆ ಬೆಂಗಳೂರಿನ ಈ ರಸ್ತೆಗಳಲ್ಲಿ ಇಂದು ಸಂಚಾರ ನಿರ್ಬಂಧಿಸಲಾಗಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ವಾಹನ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು ವ್ಯಾಪ್ತಿಯಲ್ಲಿ ವಾಹನ ಸಂಚಾರ ನಿರ್ಬಂಧಿಸಿರುವ ಮಾರ್ಗಗಳು
• ನೇತಾಜಿ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ಮೂಲಕ ಟ್ಯಾನರಿ ರಸ್ತೆ ಕಡೆಗೆ
• ಮಾಸ್ಕ್ ಜಂಕ್ಷನ್ನಿಂದ ಎಂ.ಎಂ. ರಸ್ತೆ ಮೂಲಕ ನೇತಾಜಿ ಜಂಕ್ಷನ್‌ವರೆಗೆ ಎಂ.ಎಂ. ರಸ್ತೆ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಬದಲಾಗಿ ಏಕ ಮುಖ ಸಂಚಾರವನ್ನಾಗಿ ತಾತ್ಕಾಲಿಕವಾಗಿ ಮಾರ್ಪಾಡು ಮಾಡಲಾಗಿದ್ದು, ನೇತಾಜಿ ಜಂಕ್ಷನ್‌ನಿಂದ ಮಾಸ್ಕ್ ಜಂಕ್ಷನ್ ಕಡೆಗೆ ವಾಹನಗಳ ಸಂಚಾರಕ್ಕೆ ಅವಕಾಶವಿದೆ.
• ನೇತಾಜಿ ಜಂಕ್ಷನ್‌ನಿಂದ ಹೇನ್ಸ್ ಜಂಕ್ಷನ್‌ವರೆಗೆ ನಿರ್ಬ೦ಧ
• ನಾಗವಾರ ಜಂಕ್ಷನ್‌ನಿಂದ ಪಾಟರಿ ಸರ್ಕಲ್‌ವರೆಗೆ ಭಾಗಶಃ ಸಂಚಾರ ನಿರ್ಬಂಧ
• ನೇತಾಜಿ ರಸ್ತೆ ಕಡೆಯಿಂದ ಟ್ಯಾನರಿ ರಸ್ತೆ ಮೂಲಕ ನಾಗಾವರ ಕಡೆಗೆ ಹೋಗುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಲಾಗಿದ್ದು, ನೇತಾಜಿ ಜಂಕ್ಷನ್ನಿಂದ – ಬಲತಿರುವು – ಮಾಸ್ಕ್ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ಕ್ಲಾರೆನ್ಸ್ ರೈಲ್ವೆ ಮೇಲ್ಲೇತುವೆಯಲ್ಲಿ ಪಾಟರಿ ರಸ್ತೆಗೆ ಬಲ ತಿರುವು ಪಡೆದು ಪಾಟರಿ ರಸ್ತೆ ಮತ್ತು ಹೆಣ್ಣೂರು ರಸ್ತೆ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ಹೆಣ್ಣೂರು ಮುಖ್ಯರಸ್ತೆ ಲಿಂಗರಾಜಪುರಂ ಫೈ ಓವರ್ ಮೂಲಕ ಹೆಣ್ಣೂರು, ಬಾಣಸವಾಡಿ ಹಾಗೂ ಹೊರ ವರ್ತುಲ ರಸ್ತೆ ಕಡೆಗೆ ಸಂಚರಿಸಬಹುದು.
ಪೊಲೀಸ್ ಕಾರ್ನರ್ ಕಡೆಯಿಂದ ಬರುವ ವಾಹನಗಳು ಹಡ್ನನ್ ವೃತ್ತದ ಮೂಲಕ ಕಬ್ಬನ್ಪಾರ್ಕ್ ಒಳಭಾಗ ಸಂಚರಿಸುವುದನ್ನು ನಿಷೇಧಿಸಿದ್ದು, ಸದರಿ ವಾಹನಗಳು ಕಸ್ತೂರಬಾ ರಸ್ತೆಯಲ್ಲಿ ಸಿದ್ದಲಿಂಗಯ್ಯ ವೃತ್ತದ ಕಡೆಗೆ ಸಂಚರಿಸಬಹುದು.
• ಮೈಸೂರು ರಸ್ತೆ ಸಿರ್ಸಿ ಸರ್ಕಲ್ – ಸಿರ್ಸಿ ರಸ್ತೆ ಚಾಮರಾಜಪೇಟೆ 7ನೇ ಅಡ್ಡರಸ್ತೆ – ಬಲ ತಿರುವು ಚಾಮರಾಜಪೇಟೆ 2, 3, 4 & 5ನೇ ಮುಖ್ಯರಸ್ತೆಯಲ್ಲಿ ಎಡತಿರುವು ಪಡೆದು ಸಿಟಿ ಮಾರುಕಟ್ಟೆ ಹಾಗೂ ಇತರೆ ಕಡೆಗೆ ಸಂಚರಿಸಬಹುದು.
• ಮಾಸ್ಕ್ ಜಂಕ್ಷನ್ನಿಂದ ಎಂ.ಎಂ ರಸ್ತೆಯಲ್ಲಿ ನೇತಾಜಿ ಜಂಕ್ಷನ್ ಕಡೆಗೆ ಹೋಗುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿದ್ದು, ಮಾಸ್ಕ್ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ಮಾಸ್ಕ್ ರಸ್ತೆ ಮೂಲಕ ಕೋಲ್ಸ್ ರಸ್ತೆ ತಲುಪಿ ಬಲ ತಿರುವು ಪಡೆದು ಕೋಲ್ಸ್ ರಸ್ತೆಯ ಹೆಚ್.ಪಿ ಪೆಟ್ರೋಲ್ ಬಂಕ್ ಹತ್ತಿರ ಸೌಂಡರ್ಸ್ ರಸ್ತೆಗೆ ಎಡ ತಿರುವು ಪಡೆದು ನೇರವಾಗಿ ಸೆಂಟ್ ಜಾನ್ಸ್ ಚರ್ಚ್ ರಸ್ತೆ ತಲುಪಿ ಕೋಲ್ಸ್ ಪಾರ್ಕ್ ಜಂಕ್ಷನ್ನಲ್ಲಿ ಬಲ ತಿರುವು ಪಡೆದು ಸೆಂಟ್ ಜಾನ್ಸ್ ಚರ್ಚ್ ರಸ್ತೆ ಮೂಲಕ ಹೇನ್ಸ್ ಜಂಕ್ಷನ್ ತಲುಪಲು ಅವಕಾಶ ಮಾಡಲಾಗಿದೆ.