ಮಹಾರಾಷ್ಟ್ರವು ಸತತ ಎರಡನೇ ಬಾರಿಗೆ ಭಾರತದಲ್ಲಿ ಅತಿ ಹೆಚ್ಚು ವಿದೇಶಿ ನೇರ ಹೂಡಿಕೆಯನ್ನು (ಎಫ್ಡಿಐ) ಪಡೆದುಕೊಂಡಿದೆ. ಹಾಗೂ ಕರ್ನಾಟಕ 2 ನೇ ಸ್ಥಾನ ಪಡೆದುಕೊಂಡಿದೆ.
2024-25ರ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ (ಕ್ಯೂ 1) ರಾಜ್ಯವು 70,795 ಕೋಟಿ ರೂ.ಗಳನ್ನು ಆಕರ್ಷಿಸಿದೆ, ದೇಶದಲ್ಲಿ ವಿದೇಶಿ ಹೂಡಿಕೆಯ ಪ್ರಮುಖ ತಾಣವಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.
ಇದು ಭಾರತದ ಒಟ್ಟು ಎಫ್ಡಿಐನ ಶೇಕಡಾ 52.46 ರಷ್ಟಿದೆ ಎಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ (ಡಿಪಿಐಐಟಿ) ಅಂಕಿ ಅಂಶಗಳು ತಿಳಿಸಿವೆ. ಈ ಅಂಕಿಅಂಶಗಳ ಬಗ್ಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, “ಈ ತ್ರೈಮಾಸಿಕದಲ್ಲಿ ದೇಶದಲ್ಲಿ ಒಟ್ಟು ಹೂಡಿಕೆ 1,34,959 ಕೋಟಿ ರೂ., ಅದರಲ್ಲಿ 70,795 ಕೋಟಿ ರೂ.ಗಳು ಅಥವಾ 52.46 ಪ್ರತಿಶತ ಮಹಾರಾಷ್ಟ್ರದಿಂದ ಮಾತ್ರ ಬಂದಿದೆ” ಎಂದು ಹೇಳಿದರು.
ಕಳೆದ ಎರಡು ವರ್ಷಗಳಿಂದ ಎಫ್ಡಿಐನಲ್ಲಿ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದೆ. 2023-24ರಲ್ಲಿ ರಾಜ್ಯವು 12,35,101 ಕೋಟಿ ರೂ.ಗಳ ಎಫ್ಡಿಐ ಸ್ವೀಕರಿಸಿದೆ, ಇದು ಗುಜರಾತ್ ಮತ್ತು ಗುಜರಾತ್ ಮತ್ತು ಕರ್ನಾಟಕದ ಸಂಯೋಜಿತ ಎಫ್ಡಿಐಗಿಂತ ಹೆಚ್ಚಾಗಿದೆ ಎಂದು ಫಡ್ನವೀಸ್ ಹೇಳಿದರು.ಅಂಕಿಅಂಶಗಳ ಪ್ರಕಾರ, ಮಹಾರಾಷ್ಟ್ರವು ಕರ್ನಾಟಕ, ದೆಹಲಿ, ತೆಲಂಗಾಣ ಮತ್ತು ಗುಜರಾತ್ ಸೇರಿದಂತೆ ಎಂಟು ರಾಜ್ಯಗಳನ್ನು ಹಿಂದಿಕ್ಕಿದೆ. ಒಟ್ಟು 19,059 ಕೋಟಿ ರೂ.ಗಳ ಎಫ್ಡಿಐನೊಂದಿಗೆ ಕರ್ನಾಟಕವು ಎರಡನೇ ಸ್ಥಾನದಲ್ಲಿದೆ.