ಬೆಂಗಳೂರು : ಊಟ ಕೊಡಲು ಬಂದ ಸಿಬ್ಬಂದಿ ಬಳಿ ನಟ ದರ್ಶನ್ ಚಾರ್ಜ್ ಬಗ್ಗೆ ಕೇಳಿದ್ದು, ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾದ ಮಾಹಿತಿ ಬಗ್ಗೆ ಕೇಳಿ ನಟ ದರ್ಶನ್ ದಂಗಾಗಿದ್ದಾರೆ.
ನನ್ನ ವಿರುದ್ಧ ಅಷ್ಟೊಂದು ಸಾಕ್ಷಿನಾ..? ಎಂದು ದರ್ಶನ್ ಶಾಕ್ ಆಗಿದ್ದು, 4000 ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ ಎಂಬುದನ್ನು ಕೇಳಿ ದರ್ಶನ್ ಬೆಚ್ಚಿಬಿದ್ದಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್ ಶೀಟ್ ಕೋರ್ಟ್ ಗೆ ಸಲ್ಲಿಕೆಯಾಗಿದ್ದು, ಪವಿತ್ರಾಗೌಡ ಎ-1 , ದರ್ಶನ್ ಎ-2 ಆರೋಪಿಯೆಂದು ಉಲ್ಲೇಖಿಸಲಾಗಿದೆ. ತನಿಖಾಧಿಕಾರಿ ಎಸಿಪಿ ಚಂದನ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಬೆಂಗಳೂರಿನ 24 ನೇ ಎಸಿಎಂಎಂ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 3991 ಪುಟಗಳ ಸುದೀರ್ಘವಾದ ವಿವರಗಳುಳ್ಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.