HomeKarnatakaBIG NEWS: ಟ್ಯೂಷನ್ ನೆಪದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಉಪನ್ಯಾಸಕ ಅರೆಸ್ಟ್

BIG NEWS: ಟ್ಯೂಷನ್ ನೆಪದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಉಪನ್ಯಾಸಕ ಅರೆಸ್ಟ್

ಶಿವಮೊಗ್ಗ: ಅರ್ಥವಾಗದ ವಿಷಯಗಳನ್ನು ಹೇಳಿಕೊಡುತ್ತೇನೆ ಎಂದು ಹೇಳಿ ವಿದ್ಯಾರ್ಥಿನಿಯ ಜೊತೆ ಸಲುಗೆ ಬೆಳೆಸಿ ಅತ್ಯಾಚಾರವೆಸಗಿದ್ದ ಆರೋಪದಲ್ಲಿ ಕಾಲೇಜು ಉಪನ್ಯಾಸಕನನ್ನು ಬಂಧಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದೆ.

ಪುನೀತ್ ಬಂಧಿತ ಉಪನ್ಯಾಸಕ. ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ ಪುನೀತ್, ವಿದ್ಯಾರ್ಥಿನಿಯನ್ನು ಪುಸಲಾಯಿಸಿ, ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದಾನೆ.

ಪುನೀತ್, ವಿದ್ಯಾರ್ಥಿನಿಗೆ ಆರಂಭದಲ್ಲಿ ಅರ್ಥವಾಗದ ಸಬ್ಜೆಕ್ಟ್ ಬಗ್ಗೆ ಮತ್ತೊಮ್ಮೆ ಕೇಳಿದರೆ ಪಾಠ ಮಾಡುವುದಾಗಿ ಹೇಳಿದ್ದ. ವಿದ್ಯಾರ್ಥಿನಿ ಜೊತೆ ಸಲುಗೆ ಬೆಳಿಸಿದ್ದ ಪುನೀತ್ ಬಳಿಕ ಮದುವೆಯಾಗುವುದಾಗಿ ನಂಬಿಸಿದ್ದ. ಬಳಿಕ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಿವಮೊಗ್ಗ ಮಹಿಳಾ ಠಾಣೆಯಲ್ಲಿ ಸಂತ್ರಸ್ತೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಸಾಗರದಲ್ಲಿ ಆರೋಪಿ ಉಪನ್ಯಾಸಕನ್ನು ಬಂಧಿಸಲಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular