ತಿಂಗಳ ಆ ಮೂರು ದಿನಗಳು ಮಹಿಳೆಯರ ಪಾಲಿಗೆ ನರಕಯಾತನೆ. ಬಹಳಷ್ಟು ಸ್ತ್ರೀಯರು ಮುಟ್ಟಿನ ನೋವು ತಡೆಯಲಾಗದೆ ಒದ್ದಾಡುತ್ತಾರೆ. ಅನಿವಾರ್ಯವಾಗಿ ಪೇಯ್ನ್ ಕಿಲ್ಲರ್ ಮಾತ್ರೆಗಳನ್ನು ನುಂಗುತ್ತಾರೆ. ಆದ್ರೆ ಮನೆಯಲ್ಲೇ ಕೆಲವು ಆಹಾರ ಪದಾರ್ಥಗಳ ಸೇವನೆಯಿಂದ ನೀವು ಮುಟ್ಟಿನ ನೋವಿನಿಂದ ಮುಕ್ತಿ ಪಡೆಯಬಹುದು.
ಡಾರ್ಕ್ ಚಾಕಲೇಟ್ : ಮುಟ್ಟಿನ ದಿನಗಳಲ್ಲಿ ಚಾಕಲೇಟ್ ಅಥವಾ ಸಿಹಿ ಪದಾರ್ಥಗಳನ್ನು ತಿನ್ನಬೇಕೆನಿಸುತ್ತದೆ. ಆದ್ರೆ ಅತಿಯಾಗಿ ಸಿಹಿ ತಿನ್ನಬೇಡಿ, ಡಾರ್ಕ್ ಚಾಕಲೇಟ್ ತಿನ್ನಿ. ಇದರಿಂದ ಸ್ನಾಯುಗಳು ಸಡಿಲವಾಗಿ ನೋವು ಕಡಿಮೆಯಾಗುತ್ತದೆ.
ಅವೊಕಾಡೋ : ಇದು ಆರೋಗ್ಯಕ್ಕೆ ಅತ್ಯಂತ ಉತ್ತಮವಾದದ್ದು. ತಿನ್ನಲು ಟೇಸ್ಟಿಯಾಗಿರುತ್ತದೆ ಜೊತೆಗೆ ಪೀರಿಯಡ್ಸ್ ನೋವಿನಿಂದ ಆರಾಮ ನೀಡುತ್ತದೆ. ಇದನ್ನು ಸ್ಯಾಂಡ್ ವಿಚ್ ಅಥವಾ ಸಲಾಡ್ ಮಾಡಿ ತಿನ್ನಬಹುದು.
ಅನಾನಸ್ : ಮುಟ್ಟಿನ ದಿನಗಳಲ್ಲಿ ಅನಾನಸ್ ಹಣ್ಣನ್ನು ತಿನ್ನಿ. ಇದು ಸ್ನಾಯುಗಳನ್ನು ಸಡಿಲಗೊಳಿಸಿ ನೋವನ್ನು ಕಡಿಮೆ ಮಾಡುತ್ತದೆ. ಹೊಟ್ಟೆ ತೊಳಸುವಿಕೆ ಕೂಡ ಕಡಿಮೆಯಾಗುತ್ತದೆ.
ಬಾಳೆಹಣ್ಣು : ಇದನ್ನು ತಿನ್ನುವುದರಿಂದ ಹೊಟ್ಟೆ ತೊಳಸುವಿಕೆ ಮತ್ತು ನೋವು ಎರಡರಿಂದ್ಲೂ ಮುಕ್ತಿ ಸಿಗುತ್ತದೆ. ದಾಲ್ಚಿನಿ ಮತ್ತು ಜೇನುತುಪ್ಪ ಬೆರೆಸಿಕೊಂಡು ಸೇವಿಸಿ, ಮುಟ್ಟಿನ ದಿನಗಳಲ್ಲಿ ಬಾಳೆಹಣ್ಣನ್ನು ಸೇವಿಸುವುದು ಉತ್ತಮ.
ಗ್ರೀನ್ ಟೀ : ಇದು ನಿಮ್ಮ ತೂಕ ಕಡಿಮೆ ಮಾಡುವುದು ಮಾತ್ರವಲ್ಲ ರುತುಸ್ರಾವದಲ್ಲಿ ಕಾಡುವ ನೋವನ್ನೂ ಕಡಿಮೆ ಮಾಡಬಲ್ಲದು. ಪೆಪ್ಪರ್ಮಿಂಟ್ ಟೀ ಕುಡಿಯೋದ್ರಿಂದ್ಲೂ ಹೊಟ್ಟೆ ತೊಳಸುವಿಕೆ ಮತ್ತು ನೋವು ಕಡಿಮೆಯಾಗುತ್ತದೆ.
ಪಾಲಕ್ : ಹಸಿರು ಸೊಪ್ಪನ್ನು ರುತುಸ್ರಾವದ ಸಂದರ್ಭದಲ್ಲಿ ಸೇವಿಸುವುದು ಇನ್ನೂ ಉತ್ತಮ. ಅದರಲ್ಲೂ ಪಾಲಕ್ ಸೊಪ್ಪನ್ನು ಅಡುಗೆಗೆ ಬಳಸುವುದುರಿಂದ ಪೀರಿಯಡ್ಸ್ ನೋವನ್ನು ಕಡಿಮೆ ಮಾಡಿಕೊಳ್ಳಬಹುದು.
ನೀರು : ಹೊಟ್ಟೆ ತೊಳಸುವಿಕೆಯಿಂದ ಪಾರಾಗಲು ಚೆನ್ನಾಗಿ ನೀರು ಕುಡಿಯಿರಿ. ಇದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ನಿಮ್ಮ ದೇಹವನ್ನು ನೀರು ಹೈಡ್ರೇಟ್ ಆಗಿಡಲು ಸಹಕರಿಸುತ್ತದೆ.