ಮಾಂಸಹಾರಿ ಊಟಕ್ಕೆ ಹೋಲಿಸಿದ್ರೆ ಸಸ್ಯಹಾರಿ ಭೋಜನ ಆರೋಗ್ಯಕ್ಕೆ ಒಳ್ಳೆಯದಂತೆ. ವಿಶ್ವದಾದ್ಯಂತ ನಡೆದ ಸಂಶೋಧನೆ ಬಳಿಕ ಹೀಗೊಂದು ವರದಿ ಹೊರ ಬಂದಿತ್ತು. ಒಂದು ವೇಳೆ ಇಡೀ ವಿಶ್ವವೇ ಸಸ್ಯಹಾರಿಯಾದ್ರೆ ಏನೆಲ್ಲ ಆಗಬಹುದು ಅಂತಾ ಒಮ್ಮೆ ಊಹಿಸಿ ನೋಡಿ.
2050 ರೊಳಗೆ ವಿಶ್ವ ಸಂಪೂರ್ಣವಾಗಿ ಸಸ್ಯಹಾರಿಯಾದ್ರೆ ಪ್ರತಿ ವರ್ಷ ಆಗುವ 70 ರಷ್ಟು ಸಾವು ಕಡಿಮೆಯಾಗಲಿದೆ. ಮಾಂಸಹಾರ ತ್ಯಜಿಸಿ ಸಸ್ಯಹಾರಿಯಾದ್ರೆ ಹೃದಯ ಸಮಸ್ಯೆ ಕಾಡುವುದಿಲ್ಲ. ಮಧುಮೇಹ ಹಾಗೂ ಸ್ಟ್ರೋಕ್ ಸೇರಿದಂತೆ ಅನೇಕ ರೀತಿಯ ಕ್ಯಾನ್ಸರ್ ಪ್ರಕರಣ ಕಡಿಮೆಯಾಗಲಿದೆ.
ತಜ್ಞರ ಪ್ರಕಾರ ಶೇಕಡಾ 2 ರಿಂದ 3 ರಷ್ಟು ಆಗ್ತಿರುವ ವೈದ್ಯಕೀಯ ಖರ್ಚು ಕಡಿಮೆಯಾಗಲಿದೆ. ಇದ್ರ ಜೊತೆಗೆ ಹವಾಮಾನದಲ್ಲಿ ಸುಧಾರಣೆಯಾಗಲಿದೆ.
ವಿಶ್ವ ಸಸ್ಯಹಾರಿಯಾದ್ರೆ ಲಾಭದ ಜೊತೆಗೆ ಕೆಲವೊಂದು ನಷ್ಟವೂ ಆಗಲಿದೆ. ಒಣ ಪ್ರದೇಶದಲ್ಲಿ ಪಶು ಸಂಗೋಪನೆ ನಡೆಯುತ್ತಿದೆ. ಮಾಂಸಹಾರ ತ್ಯಜಿಸಿದ್ರೆ ಪಶುಗಳ ಮಾರಾಟವಿಲ್ಲದೆ ರೈತರು ಬೀದಿಗೆ ಬೀಳ್ತಾರೆ. ಸಸ್ಯಹಾರ ಹಾಗೂ ಮಾಂಸಹಾರದಲ್ಲಿ ಯಾವುದು ಬೆಸ್ಟ್ ಎಂಬುದು ಅಂತಿಮವಾಗಿ ನಿಮಗೆ ಬಿಟ್ಟ ವಿಚಾರ.
ಭಾರತದ ಬಗ್ಗೆ ಹೇಳುವುದಾದ್ರೆ ಭಾರತದಲ್ಲಿ ಮಾಂಸಹಾರಿಗಳ ಸಂಖ್ಯೆ ಕಡಿಮೆಯಾಗ್ತಿದೆ. ಈ ಹಿಂದಿನ ವರದಿ ಪ್ರಕಾರ 10 ವರ್ಷಗಳಲ್ಲಿ ಮಾಂಸಹಾರಿಗಳ ಸಂಖ್ಯೆ ಶೇಕಡಾ 4 ರಷ್ಟು ಕಡಿಮೆಯಾಗಿದೆ. 2004 ರಲ್ಲಿ ಶೇಕಡಾ 75 ರಷ್ಟು ಮಂದಿ ಮಾಂಸಹಾರಿಗಳಾಗಿದ್ದರು. ಆದ್ರೆ 2014 ರಲ್ಲಿ ಮಾಂಸಹಾರಿಗಳ ಸಂಖ್ಯೆ ಶೇಕಡಾ 71 ಕ್ಕೆ ಕುಸಿದಿದೆ. ಇದನ್ನು ನೋಡಿ ಇಡೀ ಭಾರತ ಸಸ್ಯಹಾರಿಯಾಗಲಿದೆ ಎಂದು ಅಂದಾಜಿಸುವುದು ತಪ್ಪು.