ಬೆಂಗಳೂರ : ಕೆಪಿಎಸ್ ಸಿ ಯ KAS (KPSC) ಪರೀಕ್ಷೆ ಮುಂದೂಡಿಕೆ ಇಲ್ಲ, ನಿಗದಿಯಂತೆ ಆ.27 ರಂದು ಎಕ್ಸಾಂ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕೆಪಿಎಸ್ ಸಿ ಪರೀಕ್ಷೆ ಮುಂದೂವಂತೆ ಆಗ್ರಹ ಕೇಳಿಬಂದ ಹಿನ್ನೆಲೆ ಸ್ಪಷ್ಟನೆ ನೀಡಿದರು.
ಕೆಪಿಎಸ್ ಸಿ ಪರೀಕ್ಷೆಯಲ್ಲಿ ಯಾವುದೇ ಗೊಂದಲ್ಲ ಇಲ್ಲ, ಪರೀಕ್ಷೆಯನ್ನು ಮುಂದೂಡಿಕೆ ಮಾಡಲ್ಲ, ನಿಗದಿಯಂತೆ ಆ.27 ರಂದು ಎಕ್ಸಾಂ ನಡೆಯಲಿದೆ ಎಂದು ಅವರು ಸ್ಪಷ್ಟನೆ ನೀಡಿದರು.
ಆಗಸ್ಟ್ 27 ರಂದು ಬೆಳಗ್ಗೆ 10 ರಿಂದ 12 ಗಂಟೆಯವರೆಗೆ ಪತ್ರಿಕೆ -1, ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆಯವರೆಗೆ ಪತ್ರಿಕೆ -2ರ ಪರೀಕ್ಷೆ ನಡೆಯಲಿದೆ. ಸರ್ಕಾರಿ ಸೇವಾ ನಿರತರು ಅರ್ಜಿ ಸಲ್ಲಿಸಿದ್ದಲ್ಲಿ ಅವರು ಪರೀಕ್ಷೆಗೆ ಹಾಜರಾಗಲು ಅನುಕೂಲವಾಗುವಂತೆ ಆಗಸ್ಟ್ 27ರಂದು ಒಂದು ದಿನದ ಸಾಂದರ್ಭಿಕ ರಜೆಯನ್ನು ರಾಜ್ಯ ಸರ್ಕಾರ ಘೋಷಿಸಿದೆ.
ಪರೀಕ್ಷೆ ನಡೆಯುವ 214 ಸರ್ಕಾರಿ, 189 ಅನುದಾನಿತ, 161 ಖಾಸಗಿ ಶಾಲಾ, ಕಾಲೇಜುಗಳು ಸೇರಿದಂತೆ 564 ಪರೀಕ್ಷಾ ಉಪ ಕೇಂದ್ರಗಳಿಗೆ ವಿಶೇಷ ರಜೆ ನೀಡಲಾಗಿದೆ.