ಬೆಂಗಳೂರು : ಬೆಂಗಳೂರು ನಗರದ ಹೆಬ್ಬಾಳ ಮೇಲ್ಸೆತುವೆ (ಎಸ್ಟೀಮ್ ಮಾಲ್) ಇಂದ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್ ಜಂಕ್ಷನ್ ಮೇಲ್ಸೆತುವೆ ವರೆಗೆ ಸುರಂಗ ಮಾರ್ಗವನ್ನು ರೂ.12,690 ಕೋಟಿ ವೆಚ್ಚದಲ್ಲಿ ನಿರ್ಮಿಸಲು ನಿನ್ನೆ ನಡೆದ ಸಚಿವ ಸಂಪುಟ ಸಭೆಯು ತಾತ್ವಿಕ ಅನುಮೋದನೆ ನೀಡಿದೆ.
ಬೆಂಗಳೂರು ನಗರದ ವಾಹನ ಸವಾರರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿ, ಸಮಯ ಹಾಗೂ ಇಂಧನದ ನಷ್ಟ ತಪ್ಪಿಸಲು ಬೆಂಗಳೂರು ನಗರದ ಹೆಬ್ಬಾಳ ಮೇಲ್ಸೆತುವೆ (ಎಸ್ಟೀಮ್ ಮಾಲ್) ಇಂದ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್ ಜಂಕ್ಷನ್ ಮೇಲ್ಸೆತುವೆ ವರೆಗೆ ಸುರಂಗ ಮಾರ್ಗವನ್ನು ರೂ.12,690 ಕೋಟಿ ವೆಚ್ಚದಲ್ಲಿ ನಿರ್ಮಿಸಲು ನಿನ್ನೆ ನಡೆದ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.
ಸುರಂಗ ಮಾರ್ಗಕ್ಕೆ ಕ್ಯಾಬಿನೆಟ್ ಅಸ್ತು
* ಬೆಂಗಳೂರಿನ ಹೆಬ್ಬಾಳ ಮೇಲೇತುವೆ (ಎಸ್ಟೀಮ್ ಮಾಲ್) ಪ್ರದೇಶದಿಂದ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್ ಜಂಕ್ಷನ್ನ ಮೇಲ್ವೇತುವೆಯವರೆಗೆ ಭೂಗತ ವಾಹನ ಸುರಂಗ(ಅಂಡರ್ ಗೌಂಡ್ ವೆಹಿಕ್ಯುಲರ್ ಟನೆಲ್ ಇನ್ ಟ್ವಿನ್ ಟ್ಯೂಬ್ ಮೋಡ್) ಮಾರ್ಗವನ್ನು ನಿರ್ಮಿಸುವ ಯೋಜನೆಗೆ ಅನುಮೋದನೆ ನೀಡಲಾಗಿದೆ.
* ಬೆಂಗಳೂರು ನಗರದ ಒಟ್ಟು ಸುಮಾರು 190 ಕಿ.ಮೀ ಉದ್ದದ ವಾಹನ ದಟ್ಟಣೆಯ 11 ಕಾರಿಡಾರ್ಗಳನ್ನು ಆಯ್ಕೆ ಮಾಡಿ, ಭೂಗತ ವಾಹನ ಸುರಂಗ ಮಾರ್ಗ ನಿರ್ಮಾಣ ಮಾಡಲು ಸೂಕ್ತವೆಂದು ಅಭಿಪ್ರಾಯಪಡಲಾಗಿದೆ.
ಅಲ್ಲದೇ ಬೆಂಗಳೂರು ಹೃದಯ ಭಾಗದಲ್ಲಿ ಒಟ್ಟು ಸುಮಾರು 99.50 ಕಿ.ಮೀ ಉದ್ದದ 17 ಮೇಲ್ವೇತುವೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
* ಇದಕ್ಕೆ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತದೆ.
* ಈ ಕನಸಿನ ಯೋಜನೆಯ ಅಂದಾಜು ವೆಚ್ಚ ₹12,690 3 .