ಬೆಂಗಳೂರು : ಜಲಮಂಡಳಿಯಲ್ಲಿ ಬೃಹತ್ ವರ್ಗಾವಣೆ ದಂಧೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಒಂದೇ ದಿನ 200 ಕ್ಕೂ ಹೆಚ್ಚು ನೌಕರರನ್ನು ವರ್ಗಾವಣೆ ಮಾಡಲಾಗಿದೆ.
ರಾತ್ರೋರಾತ್ರಿ 200 ಕ್ಕೂ ಹೆಚ್ಚು ನೌಕರರನ್ನು ವರ್ಗಾವಣೆ ಮಾಡಲಾಗಿದೆ. ಹಾಗೂ ಕೆಲವರಿಗೆ ಡಬಲ್ ಪೋಸ್ಟಿಂಗ್ ಕೊಟ್ಟು ವರ್ಗಾವಣೆ ಮಾಡಲಾಗಿದೆ. ನೂರಕ್ಕೂ ಹೆಚ್ಚು ಜನರಿಗೆ ಮುಂಬಡ್ತಿ ನೀಡಲಾಗಿದೆ.
ಬೆಂಗಳೂರು ಉಸ್ತುವಾರಿ ಗಮನಕ್ಕೆ ತರದೇ ಈ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ರಾತ್ರೋರಾತ್ರಿ 200 ಹೆಚ್ಚು ಮಂದಿ ವರ್ಗಾವಣೆ ಮಾಡಲಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಕ್ಲರ್ಕ್, ಹೆಲ್ಪರ್ ಸೇರಿ ಹಲವು ಹುದ್ದೆಗಳ ವರ್ಗಾವಣೆ ನಡೆದಿದೆ. ವಾಟರ್ ಇನ್ಸ್ಪೆಕ್ಟರ್, ಕ್ಲರ್ಕ್, ಹೆಲ್ಪರ್ಗಳಿಗೆ ವರ್ಗಾವಣೆ ಭಾಗ್ಯ ದೊರೆತಿದೆ. ಪೋಸ್ಟಿಂಗ್, ಟ್ರಾನ್ಸ್ಫರ್ನಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ದುಡ್ಡು ಕೊಟ್ಟು ಪೋಸ್ಟಿಂಗ್ ಮಾಡಿಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ.
ಜಲ ಮಂಡಳಿ ನಷ್ಟದಲ್ಲಿದ್ದು, ಸಂಬಳ ಕೊಡುವುದಕ್ಕೂ ಆಗದ ಪರಿಸ್ಥಿತಿ ಇದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು. ಹಾಗೂ ನೀರಿನ ದರ ಹೆಚ್ಚಳ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಡಿಕೆಶಿ ಹೇಳಿದ್ದರು. ಈ ಬೆನ್ನಲ್ಲೇ ವರ್ಗಾವಣೆ ನಡೆದಿದೆ.