ಬೆಂಗಳೂರು : ನನ್ನನ್ನು ಬಂಧಿಸೋಕೆ 100 ಸಿದ್ದರಾಮಯ್ಯ ಬರಬೇಕು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿಯನ್ನು ಬಂಧಿಸುವ ಬಗ್ಗೆ ಈಗಲೇ ಏನನ್ನೂ ಕೂಡ ಹೇಳಲಾಗುವುದಿಲ್ಲ. ತನಿಖೆಗೆ ರಾಜ್ಯಪಾಲರು ಅನುಮತಿ ಕೊಡಬಹುದು ಎಂಬ ಭಯ ಅವರನ್ನು ಕಾಡುತ್ತಿದೆ ಎಂದರು.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಬಂಧಿಸುವ ಅಗತ್ಯಬಿದ್ದರೆ ಮುಲಾಜಿಲ್ಲದೆ ಬಂದಿಸ್ತೀವಿ. ಆದರೆ ಈಗ ಇನ್ನೂ ಬಂಧಿಸುವ ಸನ್ನಿವೇಶ ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.
ನನ್ನನ್ನು ಬಂಧಿಸೋಕೆ 100 ಸಿದ್ದರಾಮಯ್ಯ ಬರಬೇಕು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತ..
ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತ.. ಆದರೆ ನಾವು ಸಿದ್ದರಾಮಯ್ಯ ಪರ ಒಗ್ಗಟ್ಟಾಗಿದ್ದೀವಿ ಎಂದು ಮಾಧ್ಯಮಗಳ ಮುಂದೆ ಶೋ ಕೊಡುವ ನಾಯಕರು, ರಾತ್ರೋರಾತ್ರಿ ಒಳಗೊಳಗೆ ಸಭೆಗಳನ್ನು ಮಾಡ್ತಿದ್ದಾರೆ.. ಸಿಎಂ ರೇಸ್ನಲ್ಲಿರುವ ಉಪಮುಖ್ಯಮಂತ್ರಿ ಇದರ ಮುಂದಾಳ್ವವಹಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.. ಒಂದು ಮೂಲಗಳ ಪ್ರಕಾರ ಸಿದ್ದರಾಮಯ್ಯರನ್ನು ಹಣಿಯಲು ಅವರ ಪಕ್ಷದವರೇ ಕೈ ಜೋಡಿಸಿದ್ದಾರಂತೆ. ಸಿಎಂ ಹುದ್ದೆಗಾಗಿ ಬಣ ರಾಜಕೀಯವೂ ತೆರೆಮರೆಯಲ್ಲಿ ಬಿರುಸುಪಡೆದಿದೆ. ಮತ್ತೊಂದ್ಕಡೆ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಲೆಕ್ಕಾಚಾರವೂ ಜೋರಾಗಿದೆ.. ಇದರ ಮುಂದುವರಿದ ಭಾಗ ಎಂಬಂತೆ , ಸಿದ್ದರಾಮಯ್ಯ ಅವರೇ ಪೂರ್ಣಾವಧಿ 5 ವರ್ಷವೂ ಸಿಎಂ ಆಗಿರುತ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಡಿಸಿಎಂ ಡಿಕೆಶಿ ಮೌನವಹಿಸಿರುವುದು ಅನುಮಾನಗಳಿಗೆ ಪುಷ್ಠಿನೀಡಿದೆ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.