alex Certify ಶರಾವತಿ ಹಿನ್ನೀರಿನಲ್ಲಿ ದುರಂತ: ಬಲೆ ಬಿಡಿಸಲು ಹೋಗಿ ಯುವಕ ನೀರುಪಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶರಾವತಿ ಹಿನ್ನೀರಿನಲ್ಲಿ ದುರಂತ: ಬಲೆ ಬಿಡಿಸಲು ಹೋಗಿ ಯುವಕ ನೀರುಪಾಲು

ಶಿವಮೊಗ್ಗ: ಮೀನು ಹಿಡಿಯಲೆಂದು ಹಾಕಿದ್ದ ಬಲೆ ತೆಗೆಯಲು ಹೋಗಿ ಯುವಕನೊಬ್ಬ ನೀರು ಪಾಲಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಮರಿ ಗ್ರಾಮದಲ್ಲಿ ಶರಾವತಿ ಹಿನ್ನೀರಿನಲ್ಲಿ ನಡೆದಿದೆ.

ಜಡ್ಡಿನಬೈಲ ಮೀನುಗಾರ ರವಿ (30) ಮೃತ ದುರ್ದೈವಿ. ಮೀನಿನ ಬಲೆ ಬಿಡಿಸುವಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಯುವಕ ಸಾವನ್ನಪ್ಪಿದ್ದಾನೆ.

ಶರಾವತಿ ಹಿನ್ನೀರಿನಲ್ಲಿ ಮೀನು ಹಿಡಿಯಲು ಬಲೆ ಹಾಕಲಾಗಿತ್ತು. ಬಲೆ ಬಿಡಿಸಲೆಂದು ಹೋಗಿ ಈ ದುರಂತ ಸಂಭವಿಸಿದೆ. ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...