ಬೆಂಗಳೂರು : ಸಿಎಂ ಸಿದ್ದರಾಮಯ್ಯರ ಖುರ್ಚಿ ಉರುಳಿಸಲು ಕಾಂಗ್ರೆಸ್ನಲ್ಲಿ ತೆರೆಮರೆಯ ಆಟ ನಡೆಯುತ್ತಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ ಬಡವರ ನಿವೇಶನಗಳನ್ನು ನುಂಗಿ ನೀರು ಕುಡಿದು, ಭಂಡತನದಿಂದ ಖುರ್ಚಿಗೆ ಅಂಟಿಕೊಂಡಿರುವ ಸಿಎಂ ಸಿದ್ದರಾಮಯ್ಯನವರ ಖುರ್ಚಿ ಕಬಳಿಸಲು ಕಾಂಗ್ರೆಸ್ನಲ್ಲಿ ತೆರೆಮರೆಯ ಆಟ ಜೋರಾಗಿದೆ. ಸಿದ್ದರಾಮಯ್ಯನವರ ಬೆಂಬಲಕ್ಕೆ ಬಂಡೆಯಂತೆ ನಿಲ್ಲುತ್ತೇವೆ ಎನ್ನುತ್ತಲೇ ಸಂಚು ರೂಪಿಸುತ್ತಿರುವ ಹಲವು ಬಣಗಳು, ಗದ್ದುಗೆಗಾಗಿ ಮಸಲತ್ತಿನ ಬಲೆ ಹೆಣೆಯುವುದರಲ್ಲಿ ಬ್ಯುಸಿಯಾಗಿವೆ. ನೈತಿಕತೆಯಿಲ್ಲದ ಮುಖ್ಯಮಂತ್ರಿಗಳೇ, ಸಂಚಿನ ಪದಚ್ಯುತಿಗೆ ಬಲಿಯಾಗುವ ಮುನ್ನ ರಾಜೀನಾಮೆ ನೀಡಿ, ಮುಖ್ಯಮಂತ್ರಿ ಸ್ಥಾನದ ಗೌರವ ಉಳಿಸಿ. ಇಲ್ಲದಿದ್ದರೇ, ಕಾಂಗ್ರೆಸ್ ನ ಕೆಟ್ಟ ಇತಿಹಾಸದ ಪುಟಗಳಲ್ಲಿ ನೀವು ಮತ್ತೊಂದು ಅಧ್ಯಾಯವಾಗುವಿರಿ ಎಚ್ಚರ! ಎಂದು ಬಿಜೆಪಿ ಹೇಳಿದೆ.
ಬಡವರ ನಿವೇಶನಗಳನ್ನು ನುಂಗಿ ನೀರು ಕುಡಿದು, ಭಂಡತನದಿಂದ ಖುರ್ಚಿಗೆ ಅಂಟಿಕೊಂಡಿರುವ ಸಿಎಂ @siddaramaiah ನವರ ಖುರ್ಚಿ ಕಬಳಿಸಲು ಕಾಂಗ್ರೆಸ್ನಲ್ಲಿ ತೆರೆಮರೆಯ ಆಟ ಜೋರಾಗಿದೆ.
ಸಿದ್ದರಾಮಯ್ಯನವರ ಬೆಂಬಲಕ್ಕೆ ಬಂಡೆಯಂತೆ ನಿಲ್ಲುತ್ತೇವೆ ಎನ್ನುತ್ತಲೇ ಸಂಚು ರೂಪಿಸುತ್ತಿರುವ ಹಲವು ಬಣಗಳು, ಗದ್ದುಗೆಗಾಗಿ ಮಸಲತ್ತಿನ ಬಲೆ ಹೆಣೆಯುವುದರಲ್ಲಿ… pic.twitter.com/LsWYioXW3b
— BJP Karnataka (@BJP4Karnataka) August 21, 2024

