ಸಾಮಾನ್ಯವಾಗಿ ಯುವ ಜೋಡಿ ತಮ್ಮ ಸಂಗಾತಿಗೆ ಮೋಸ ಮಾಡ್ತಾರೆ. ಒಬ್ಬರಾದ ಮೇಲೆ ಒಬ್ಬರಂತೆ ಸಂಗಾತಿಗಳನ್ನು ಬದಲಾಯಿಸುವ ಪ್ರವೃತ್ತಿ ಕೂಡ ಅವರಿಗಿರುತ್ತದೆ. ಮನೆ ಬಿಟ್ಟು ಇನ್ನೊಂದು ಸಂಬಂಧ ಬೆಳೆಸಲು ಅವರು ಉತ್ಸುಕರಾಗಿರುತ್ತಾರೆಂದು ಸಾಮಾನ್ಯವಾಗಿ ಎಲ್ಲರೂ ಅಂದುಕೊಂಡಿದ್ದಾರೆ. ಆದ್ರೆ ಅಧ್ಯಯನವೊಂದು ಹೊಸ ವಿಷಯ ಹೇಳಿದೆ.
ಅಧ್ಯಯನದ ಪ್ರಕಾರ, ಯುವ ಜನತೆಗಿಂತ ವಯಸ್ಸಾದ ವ್ಯಕ್ತಿಗಳು ತಮ್ಮ ಸಂಗಾತಿಗೆ ಹೆಚ್ಚು ಮೋಸ ಮಾಡ್ತಾರಂತೆ. ಇನ್ಸ್ಟಿಟ್ಯೂಟ್ ಫಾರ್ ಫ್ಯಾಮಿಲಿ ಸ್ಟಡೀಸ್ ವರದಿ ಪ್ರಕಾರ, 55 ವರ್ಷ ವಯಸ್ಸಿನ ಶೇಕಡಾ 20ರಷ್ಟು ಮಂದಿ ಎರಡನೇ ಸಂಬಂಧ ಹೊಂದಿರುತ್ತಾರಂತೆ. 55 ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನ ಶೇಕಡಾ 14ರಷ್ಟು ಮಂದಿ ಎರಡನೇ ಸಂಬಂಧ ಹೊಂದಿರುತ್ತಾರಂತೆ.
ವಯಸ್ಸಾದ ವ್ಯಕ್ತಿಗಳಿಗೆ ಮದುವೆಯಾಗಿ ಅನೇಕ ವರ್ಷ ಕಳೆದಿರುತ್ತದೆ. ಸಂಗಾತಿಗಳಿಗೆ ಮೋಸ ಮಾಡಲು ಅವರಿಗೆ ಸಾಕಷ್ಟು ಸಮಯ ಸಿಗುತ್ತದೆ ಎಂದು ಅಧ್ಯಯನ ಹೇಳಿದೆ. ಹಾಗೆ 2000 ಇಸವಿ ನಂತ್ರ ಎರಡನೇ ಸಂಬಂಧದ ಸಂಖ್ಯೆ ಜಾಸ್ತಿಯಾಗಿದೆ ಎಂದು ಅಧ್ಯಯನ ಹೇಳಿದೆ. ಅಂದ ಹಾಗೇ ಇದು ವಿದೇಶದಲ್ಲಿ ನಡೆದಿದ್ದ ಅಧ್ಯಯನ.