ನವದೆಹಲಿ: ಕೋಲ್ಕತಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣದ ತನಿಖಾಧಿಕಾರಿಗಳು ಆರೋಪಿಗಳನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಬಹುದು ಎಂದು ಕಲ್ಕತ್ತಾ ಹೈಕೋರ್ಟ್ ಇಂದು ಹೇಳಿದೆ.
ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸ್ವಯಂಸೇವಕ ಮತ್ತು ಶಂಕಿತ ಅಪರಾಧ ಸ್ಥಳದಿಂದ ಹೊರಹೋಗುವ ಸಿಸಿಟಿವಿಯಲ್ಲಿ ಕಂಡುಬಂದ ಆರೋಪಿ ಸಂಜಯ್ ರಾಯ್ ಮೇಲೆ ಪಾಲಿಗ್ರಾಫ್ ಪರೀಕ್ಷೆ ನಡೆಸಲು ಕೇಂದ್ರ ತನಿಖಾ ದಳ (ಸಿಬಿಐ) ಪ್ರಯತ್ನಿಸುತ್ತಿದೆ.
ಆರೋಪಿಯಿಂದ ಇನ್ನಷ್ಟು ಸತ್ಯ ಬಾಯ್ಬಿಡಿಸಲು ಸುಳ್ಳು ಪತ್ತೆ ಪರೀಕ್ಷೆ (ಲೈ ಡಿಟೆಕ್ಷನ್)ಗೆ ಒಳಪಡಿಸಲು ಸಿಬಿಐ ಮುಂದಾಗಿದೆ.
ಏನಿದು ಸುಳ್ಳು ಪತ್ತೆ ಪರೀಕ್ಷೆ
ಯಾವುದಾದರೂ ಒಂದು ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸುಳ್ಳು ಹೇಳುತ್ತಿದ್ದರೆ ಅದನ್ನು ಖಚಿತ ಪಡಿಸಿಕೊಳ್ಳಲು ಪೊಲೀಸರು ಸಾಮಾನ್ಯವಾಗಿ ಸುಳ್ಳು ಪತ್ತೆ ಪರೀಕ್ಷೆ ಮಾಡುತ್ತಾರೆ. ಅರೋಪಿಗೆ ಮೊದಲು ಚುಚ್ಚು ಮದ್ದು ಕೊಡಲಾಗುತ್ತದೆ. ಆ ನಂತರ ಅವರನ್ನು ಘಟನೆಗೆ ಸಂಬಂಧಿಸಿದಂತೆ ಪ್ರಶ್ನೆ ಮಾಡಲಾಗುತ್ತದೆ. ಆ ಪ್ರಶ್ನೆಗೆ ಉತ್ತರಿಸುವಾಗ ಅವರ ಉಸಿರಾಟ ಸೇರಿದಂತೆ ಮನಸಿನಲ್ಲಿ ಉಂಟಾಗುವ ಒತ್ತಡವನ್ನು ಆಧರಿಸಿ ಸುಳ್ಳು ಪತ್ತೆ ಯಂತ್ರ ಸೂಚನೆ ನೀಡುತ್ತದೆ.