ಜಗತ್ತಿನ ವಿವಿಧೆಡೆ ಅಂತರಾಷ್ಟ್ರೀಯ ಚುಂಬನ ದಿನ ಆಚರಿಸಲಾಗುತ್ತದೆ. ಚುಂಬನಕ್ಕೆ ಕೆಲವೊಂದು ಈಸಿ ಟಿಪ್ಸ್ ಇದೆ. ಅದರಲ್ಲೂ ಮೊದಲ ಮುತ್ತಿನ ಬಗ್ಗೆ ಮಾತನಾಡಲೇಬೇಕು. ಯಾಕಂದ್ರೆ ಪ್ರಥಮ ಚುಂಬನ ಸಹಜವಾಗಿಯೇ ಎಲ್ಲರಲ್ಲೂ ಕಾತರ, ಕುತೂಹಲ ಮೂಡಿಸಿರುತ್ತೆ.
ಪ್ರಥಮ ಚುಂಬನಂ ದಂತಭಗ್ನಂ ಎಂಬಂತಾದ್ರೆ ಮುಜುಗರ ಆಗೋದು ಗ್ಯಾರಂಟಿ. ಪರ್ಫೆಕ್ಟ್ ಫಸ್ಟ್ ಕಿಸ್ ಹೇಗಿರಬೇಕು ಅನ್ನೋದನ್ನು ತಿಳಿದುಕೊಂಡ್ರೆ ಡೇಟಿಂಗ್ ಈಸಿಯಾಗ್ಬಹುದು.
ಮೊದಲ ಬಾರಿ ನಿಮ್ಮ ಪ್ರೀತಿಪಾತ್ರರನ್ನು ಚುಂಬಿಸುವ ಮುನ್ನ, ಮರಳಿ ನಿಮ್ಮನ್ನು ಚುಂಬಿಸಲು ಅವರಿಗೆ ಇಷ್ಟವಿದ್ಯಾ? ಈ ಕಿಸ್ ಗೆ ಅವರ ಸಮ್ಮತಿ ಇದ್ಯಾ ಅನ್ನೋದನ್ನು ಖಚಿತಪಡಿಸಿಕೊಳ್ಳಿ. ಈ ರೊಮ್ಯಾಂಟಿಕ್ ಕ್ಷಣಕ್ಕೆ ಇಬ್ಬರ ಸಮ್ಮತಿಯೂ ಅತ್ಯಗತ್ಯ.
ಮೊದಲ ಬಾರಿ ಮುತ್ತಿಡುವ ಮುನ್ನ ನಿಮ್ಮ ಉಸಿರು ಸ್ವಚ್ಛವಾಗಿರಲಿ. ಫ್ರೆಶ್ನೆಸ್ ಇರಲಿ. ಕಿಸ್ ಮಾಡುವ ಮುನ್ನ ಮಿಂಟ್ ತಿನ್ನಿ. ಈರುಳ್ಳಿ ಅಥವಾ ಬೆಳ್ಳುಳ್ಳಿ ತಿಂದು ಯಾವುದೇ ಕಾರಣಕ್ಕೂ ಮುತ್ತಿಡಬೇಡಿ.
ತುಟಿಗಳು ಒಡೆದಿದ್ರೆ, ಒರಟಾಗಿದ್ರೆ ಚುಂಬನದಲ್ಲಿ ಆಹ್ಲಾದತೆ ಇರುವುದಿಲ್ಲ. ಮುತ್ತಿಡುವ ಸಂದರ್ಭದಲ್ಲಿ ತುಟಿಗಳು ಮೃದುವಾಗಿರಬೇಕು. ಅದಕ್ಕಾಗಿ ಬಾಮ್ ಹಚ್ಚಿಕೊಳ್ಳಬಹುದು. ಮಹಿಳೆಯರು ಮೊದಲ ಕಿಸ್ ಮಾಡುವಾಗ ಗಾಢವಾದ ಲಿಪ್ ಸ್ಟಿಕ್ ಅಥವಾ ತುಂಬಾ ಗ್ಲಾಸಿಯಾದ ಬಣ್ಣಗಳನ್ನು ತುಟಿಗೆ ಹಚ್ಚಿಕೊಳ್ಳಬೇಡಿ.
ಅಬ್ಬರದ ಸಂಗೀತ, ಜೋರಾದ ಮಾತು, ಗದ್ದಲ, ಜನಸಂದಣಿ ಇರುವ ಸ್ಥಳವನ್ನು ಪ್ರಥಮ ಚುಂಬನಕ್ಕೆ ಆಯ್ಕೆ ಮಾಡಿಕೊಳ್ಳಬೇಡಿ. ಮೊದಲ ಮುತ್ತು ಸದಾ ನೆನಪಿನಲ್ಲುಳಿಯಬೇಕೆಂಬ ಆಸೆ ಇದ್ರೆ ಅದಕ್ಕಾಗಿ ರೊಮ್ಯಾಂಟಿಕ್ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ.
ಕಿಸ್ ಬಗ್ಗೆ ಅತಿಯಾದ ಉತ್ಸಾಹ ಒಳ್ಳೆಯದಲ್ಲ. ನಿಮ್ಮ ಅಪ್ರೋಚ್ ತುಂಬಾ ನಿಧಾನವಾಗಿರಲಿ. ಪುರುಷ ಆಗಲಿ ಮಹಿಳೆ ಆಗಲಿ ಅವರನ್ನು ಜೋರಾಗಿ ಎಳೆದು ತಬ್ಬಿಕೊಂಡು ಚುಂಬಿಸುವುದು ಸರಿಯಲ್ಲ. ಕಣ್ಣಲ್ಲಿ ಕಣ್ಣಿಟ್ಟು ನೋಡಿ ನಿಧಾನವಾಗಿ ತುಟಿಗೆ ತುಟಿ ಬೆರೆಸಿ.
ಮೊದಲ ಮುತ್ತನ್ನು ನೀಡುವ ಸಂದರ್ಭದಲ್ಲಿ ನಿಮ್ಮ ಸ್ಪರ್ಷ ಅತ್ಯಂತ ಮೃದುವಾಗಿರಬೇಕು. ತುಂಬಾ ಆತುರದ ಮನುಷ್ಯ ಅನ್ನೋದನ್ನು ತೋರ್ಪಡಿಸಿಕೊಳ್ಳಬೇಡಿ.