ಬೆಂಗಳೂರು : ಸಂತಾನ ನಿರೋಧ ಶಸ್ತ್ರಚಿಕಿತ್ಸೆಗೆ ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಕುಟುಂಬ ಯೋಜನೆಯಡಿಯಲ್ಲಿ ಮಹಿಳೆಯರ ಅತಿ ನೆಚ್ಚಿನ ಅತಿ ಹೆಚ್ಚು ಬಳಕೆಯಲ್ಲಿರುವ ಕುಟುಂಬ ಯೋಜನ ವಿಧಾನವು ಸಂತಾನ ನಿರೋಧ ಶಸ್ತ್ರ ಚಿಕಿತ್ಸೆ ಆಗಿರುತ್ತದೆ ಎಂದು ತಿಳಿಸಿದೆ.
ಶಾಶ್ವತ ಕುಟುಂಬ ಯೋಜನೆಗೆ ಸಂಭಂದಿಸಿದಂತೆ ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ನಡೆಯುವ ಶಸ್ತ್ರಚಿಕಿತ್ಸಾ ವಿಧಾನಗಳು
ಸ್ತ್ರೀ ಸಂತಾನ ನಿರೋಧ ಶಸ್ತ್ರ ಚಿಕಿತ್ಸೆಗಳು: ಹರಿಗೆಯ ತಕ್ಷಣ. ಮಧ್ಯಂತರ, ಲ್ಯಾಪ್ರೋಸ್ಕೋಪಿಕ್ ಮತ್ತು ಹರಿಗೆಯ ಜೊತೆಯಲ್ಲಿ.ಪುರುಷ ಸಂತಾನ ನಿರೋಧ ಶಸ್ತ್ರ ಚಿಕಿತ್ಸೆಗಳು: ನೋ ಸ್ಮಾಲ್ ವೆಲ್ ವ್ಯಾಸಕೃಮಿ.
ಶಾಶ್ವತ ಕುಟುಂಬ ಯೋಜನೆ ವಿಧಾನಗಳು ಲಭ್ಯವಿರುವ ಆರೋಗ್ಯ ಕೇಂದ್ರಗಳು :
ಎಲ್ಲಾ ಜಿಲ್ಲಾ ಮಟ್ಟದ ಆಸ್ಪತ್ರೆಗಳು, ತಾಲ್ಲೂಕು ಮಟ್ಟದ ಆಸ್ಪತ್ರೆಗಳು ಮತ್ತು ಆಯ್ಕೆ ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಆಯ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು.
ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಪರಿಹಾರಧನ ನೀಡುವ ಯೋಜನೆ (FPIS):- ಶಸ್ತ್ರಚಿಕಿತ್ಸೆ ಸಮಯದಲ್ಲಿ ಫಲಾನುಭವಿಗೆ ವಿಫಲ/ತೊಂದರೆ/ಮರಣ ಸಂಭವಿಸಿದರೆ ಈ ಕೆಳಕಂಡಂತೆ ಪರಿಹಾರಧನ ನೀಡಲಾಗುವುದು.
1. 22. 60,000
2. ತೊಂದರೆ:- ರೂ.50,000 (ಗರಿ)
3. – da, 4,00,000
4. ಯಾವುದೇ ಶಸ್ತ್ರಚಿಕಿತ್ಸಕರು ಯಾವುದೇ ಸಮಯದಲ್ಲಿ ನಡೆಸಿದ ಶಸ್ತ್ರಚಿಕಿತ್ಸೆಗಳಲ್ಲಿ 4 ವಿಫಲ ಪ್ರಕರಣಗಳು ಒಂದೇ ವರ್ಷದಲ್ಲಿ ಧಾಖಲಾದಲ್ಲಿ ನೋಂದಾವಣೆಯಿಂದ ರದ್ದು ಗೊಳಿಸಲಾಗುವುದು. ಸದರಿ ಶಸ್ತ್ರಚಿಕಿತ್ಸಕರನ್ನು
ಫಲಾನುಭವಿಗಳಿಗೆ ನೀಡುವ ಪ್ರೋತ್ಸಾಹ ಧನ:-
ಮಹಿಳಾ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಫಲಾನುಭವಿಗೆ:
ಎ.ಪಿ.ಎಲ್ ಪ್ರಕರಣಗಳಿಗೆ ರೂ. 250/-
ಬಿ.ಪಿ.ಎಲ್/ ಎಸ್.ಸಿ / ಎಸ್.ಟಿ. ಪ್ರಕರಣಗಳಿಗೆ ರೂ. 600/-ನೀಡಲಾಗುವುದು
ಪುರುಷ ಸಂತಾನ ನಿರೋಧ ಶಸ್ತ್ರಚಿಕಿತ್ಸೆಗೆ ಪ್ರತಿ ಫಲಾನುಭವಿಗೆ ರೂ. 1100/- ಗಳನ್ನು ನೀಡಲಾಗುವುದು
ಸಂತಾನ ನಿರೋಧ ಶಸ್ತ್ರಚಿಕಿತ್ಸೆಗಳನ್ನು ಶಿಬಿರಗಳಲ್ಲಿ/ನಿಗದಿತ ದಿನದಂದು ನಡೆಸುವ ಕಾರ್ಯಕ್ರಮಾಧಿಕಾರಿಗಳು ಅನುಸರಿಸಬೇಕಾದ ಮಾರ್ಗಸೂಚಿಯು ಕೆಳಕಂಡಂತಿದೆ.
1) ನಿಗದಿಪಡಿಸಿದ ಶಿಬಿರಗಳು/ ನಿಗದಿತ ದಿನದಂದು ನಡೆಸುವ ಶಸ್ತ್ರಚಿಕಿತ್ಸಾ ಸೇವೆಗಳ ಮಾಹಿತಿಯು, ಸದರಿ ಆಸ್ಪತ್ರೆಯ ವ್ಯಾಪ್ತಿಯಲ್ಲಿನ ಎಲ್ಲಾ ಆರೋಗ್ಯ ಕಾರ್ಯಕರ್ತೆ/ಕಾರ್ಯಕರ್ತರುಗಳಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ, ಉಪಕೇಂದ್ರಗಳಿಗೆ ತಲುಪಿರುವ ಬಗ್ಗೆ ಖಾತರಿ ಪಡಿಸಿಕೊಳ್ಳುವುದು.
2) ಅರ್ಹ ಫಲಾನುಭವಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಗಳು ತಪಾಸಣೆ ನಡೆಸಿ
ಶಸ್ತ್ರಚಿಕಿತ್ಸೆಗೆ ಅರ್ಹರೆಂದು ಪಟ್ಟಿ ತಯಾರಿ ಮಾಡಿ ಸಲ್ಲಿಸಲು ಕ್ರಮವಹಿಸುವುದು.
3) ಶಿಬಿರ / ಶಸ್ತ್ರಚಿಕಿತ್ಸೆ ನಡೆಯುವ ಆರೋಗ್ಯ ಕೇಂದ್ರದಲ್ಲಿ ಶಸ್ತ್ರಚಿಕಿತ್ಸೆಯನ್ನು ಬೆಳಗಿನ ಸಮಯದಲ್ಲಿ ನಡೆಸಲು ಸೂಚಿಸುವುದು ಮತ್ತು ನಿಗದಿತ ಸಮಯದಲ್ಲಿ ನಡೆಯುವಂತೆ ಮೇಲ್ವಿಚಾರಣೆ ನಡೆಸುವುದು.
4) ಸಂಭಂಧ ಪಟ್ಟ ಆಡಳಿತ ವೈಧ್ಯಾಧಿಕಾರಿಗಳು ಶಿಬಿರಕ್ಕೆ / ಶಸ್ತ್ರಚಿಕಿತ್ಸೆಗೆ ಸಂಭಂಧ ಪಟ್ಟಿ ಎಲ್ಲಾ ಅವಶ್ಯಕತೆಗಳನ್ನು (ಔಷಧಿಗಳು, ಸಾಧನ ಸಲಕರಣೆಗಳು, ಮಾನವ ಸಂಪನ್ಮೂಲ, ಲಾಜಿಸ್ಟಿಕ್ಸ) ಪೂರೈಸುವ ಬಗ್ಗೆ ಕ್ರಮವಹಿಸುವುದು.
5) ಶಿಬಿರಗಳಲ್ಲಿ 5 ಕ್ಕಿಂತ ಮೇಲ್ಪಟ್ಟ ಫಲಾನುಭವಿಗಳು ಧಾಖಲಾದಲ್ಲಿ ಶಿಬಿರದ ಮೇಲ್ವಿಚಾರಣೆ ನಡೆಸಲು ಸದರಿ ಆಸ್ಪತ್ರೆಯ GDMO ವೈದ್ಯರು / ಲಭ್ಯವಿರುವ ವೈದ್ಯಾಧಿಕಾರಿಯನ್ನು ಗುರುತಿಸಿ ನೇಮಿಸುವುದು.
6) ಶಸ್ತ್ರಚಿಕಿತ್ಸಕರು ಮತ್ತು ಅರವಳಿಕೆ ತಜ್ಞರು ಸರಿಯಾದ / ನಿಗದಿತ ಸಮಯಕ್ಕೆ ಹಾಜರಾಗಿರುವ ಬಗ್ಗೆ ಖಾತರಿ ಪಡಿಸಿಕೊಳ್ಳುವುದು.
7) ಫಲಾನುಭವಿಗಳಿಗೆ ಅಗತ್ಯ ಬೆಡ್ ಸೌಕರ್ಯ, ಲಿನೆನ್ ಲಭ್ಯತೆ ಮತ್ತು ಇತರೆ ಮೂಲಭೂತ ಸೌಕರ್ಯಗಳ ಲಭ್ಯತೆಯನ್ನು ಕಾಪಾಡಿರುವ ಬಗ್ಗೆ ಖಾತರಿ ಪಡಿಸಿಕೊಳ್ಳುವುದು.
8) ವಿವಿಧ ಆರೋಗ್ಯ ಸಿಬ್ಬಂದಿಗಳ ಜವಾಬ್ದಾರಿಗಳನ್ನು ಕೆಳಕಂಡಂತೆ ನಿಗದಿ ಪಡಿಸಲಾಗಿದ್ದು ಸದಿಯವರ
ಕಾರ್ಯವೈಖರಿಯನ್ನು ಮೇಲ್ವಿಚಾರಣೆ ಮಾಡುವುದು.
9) ಶಿಬಿರಗಳಿಗೆ ಬೇಟಿ ನೀಡಿ ಅನಬಂಧ-1 ರ ವರದಿಯನ್ನು ಧಾಖಲಿಸಿ ಪ್ರತಿ ಮಾಹೆ ಕ್ರೂಡೀಕರಿಸಿದ ಅನಬಂಧ-1
ರ ಮಾಹಿತಿಯನ್ನು ರಾಜ್ಯ ಮಟ್ಟಕ್ಕೆ ಸಲ್ಲಿಸುವುದು.
10) ಶಿಬಿರ ಮುಗಿದ ನಂತರ ಶಸ್ತ್ರಚಿಕಿತ್ಸಕರು ಮತ್ತು ಅರವಳಿಕೆ ತಜ್ಞರು ಎಲ್ಲಾ ಫಲಾನುಭವಿಗಳನ್ನು ಮತ್ತೊಮ್ಮೆ ಪರೀಕ್ಷೆ ನಡೆಸಿ ಕೆಳಕಂಡ ಯಾವುದೇ ತೊಂದರೆಗಳು ವರದಿಯಾಗಿಲ್ಲದಿರುವ ಸಿಬ್ಬಂದಿಗಳು ಖಾತರಿ ಪಡಿಸಿಕೊಂಡು ಫಲಾನುಭವಿಗಳನ್ನು ಬಿಡುಗಡೆ ಮಾಡುತ್ತಿರುವ ಬಗ್ಗೆ, ಖಾತರಿ ಪಡಿಸಿಕೊಳ್ಳುವುದು.
ವಾಂತಿ
ನಿಲ್ಲಲು ಆಗದೇ ಇರುವುದು.
ಹೊಟ್ಟೆಯಲ್ಲಿ ರಕ್ತ ಸ್ರಾವವಾಗುತ್ತಿರುವ ಯಾವುದಾದರು ಲಕ್ಷಣಗಳು
ಹೈಪೋವೊಲೇಮಿಯಾ ಲಕ್ಷಣಗಳು
ಅರವಳಿಕೆಯಿಂದ ನಿಧಾನವಾಗಿ ಮುಕ್ತಿಹೊಂದುವುದು
ಫಲಾನುಭವಿಯ ಜೊತೆ ಜವಾಬ್ದಾರಿಯುತ ಒಬ್ಬ ವಯಸ್ಕರಿರುವುದನ್ನು ಖಚಿತ ಪಡಿಸಿಕೊಳ್ಳುವುದು.
ಸಂಜೆ ತಡವಾಗಿರುವುದು
11) ಫಲಾನುಭವಿಗಳಿಗೆ ಕೆಳಕಂಡ ತೊಂದರೆಗಳು ಏನಾದರು ಫಲಾನುಭವಿಗಳಿಗೆ ಶಸ್ತ್ರಚಿಕಿತ್ಸೆ ನಂತರ ಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ವರದಿ ಮಾಡಿಕೊಳ್ಳಲು ಆಸ್ಪತ್ರೆ ಸಿಬ್ಬಂದಿಗಳು ಸೂಚಿಸಿರುವುದನ್ನು ಖಾತರಿ ಪಡಿಸಿಕೊಳ್ಳುವುದು