ದ್ವಿಚಕ್ರ ವಾಹನ ಅದರಲ್ಲೂ ಸ್ಕೂಟಿ, ಓಕ್ಸೆಸ್ 125 ಮಾದರಿಯ ವಾಹನಗಳನ್ನು ಓಡಿಸುವವರಿಗೆ ಸೆಂಟರ್ ಸ್ಟ್ಯಾಂಡ್ ಹಾಕುವುದೇ ದೊಡ್ಡ ಸಮಸ್ಯೆ. ಇಂತಹ ವಾಹನಗಳನ್ನು ವಿದ್ಯಾರ್ಥಿನಿಯರು, ಉದ್ಯೋಗಸ್ಥ ಮಹಿಳೆಯರು ಹೆಚ್ಚಾಗಿ ಬಳಸುತ್ತಿದ್ದು, ಸೆಂಟರ್ ಸ್ಟ್ಯಾಂಡ್ ಹಾಕುವ ಸಂದರ್ಭ ಬಂದರೆ ಬಲು ಕಷ್ಟ ಅನುಭವಿಸುತ್ತಾರೆ.
ಅದರಲ್ಲೂ ಸೆಲ್ಫ್ ಸ್ಟಾರ್ಟಿಂಗ್ ಬಟನ್ ಒತ್ತಿದರೂ ಸ್ಟಾರ್ಟ್ ಆಗದ ಸಂದರ್ಭದಲ್ಲಿ ಸೆಂಟರ್ ಸ್ಟ್ಯಾಂಡ್ ಹಾಕಿಯೇ ಕಿಕ್ ಹೊಡೆಯಬೇಕಾದ ಪರಿಸ್ಥಿತಿ ಬರುವ ಕಾರಣ ಅಂತಹ ಸಂದರ್ಭದಲ್ಲಿ ಬಹಳಷ್ಟು ಫಜೀತಿ ಅನುಭವಿಸಬೇಕಾಗುತ್ತದೆ. ಅಲ್ಲದೆ ನೆರವಿಗಾಗಿ ಮತ್ತೊಬ್ಬರನ್ನು ಯಾಚಿಸಬೇಕಾಗುತ್ತದೆ.
ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ಸೆಂಟರ್ ಸ್ಟ್ಯಾಂಡ್ ಅನ್ನು ಅದೆಷ್ಟು ಸುಲಭವಾಗಿ ಹಾಕಬಹುದು ಎಂಬುದನ್ನು ತೋರಿಸಿದೆ. ವಿಡಿಯೋದಲ್ಲಿ ಕಂಡು ಬರುವಂತೆ ಮಧ್ಯ ವಯಸ್ಕ ವ್ಯಕ್ತಿಯೊಬ್ಬರು ಮೊದಲಿಗೆ ಸೈಡ್ ಸ್ಟ್ಯಾಂಡ್ ಹಾಕಿ ಆನಂತರ ಅದನ್ನು ಪೂರ್ಣವಾಗಿ ವಾಲಿಸಿ ಸೆಂಟರ್ ಸ್ಟ್ಯಾಂಡ್ ಅನ್ನು ಕಾಲಲ್ಲಿ ಒತ್ತಿ ಬಳಿಕ ವಾಹನವನ್ನು ಯಥಾ ಸ್ಥಿತಿಯಲ್ಲಿ ಇಡುತ್ತಾರೆ. ಆಗ ಸೆಂಟರ್ ಸ್ಟ್ಯಾಂಡ್ ಮೇಲೆ ವಾಹನ ನಿಂತಿರುತ್ತದೆ. ಈ ವಿಡಿಯೋ ನೋಡಿ ನೀವೂ ಒಮ್ಮೆ ಟ್ರೈ ಮಾಡಿ.