BREAKING : ಕೆಂಗಲ್ ನಿಂದ 3 ನೇ ದಿನದ ‘ದೋಸ್ತಿ’ ಪಕ್ಷಗಳ ಪಾದಯಾತ್ರೆ ಆರಂಭ ; ಇಂದು ನಿಡಘಟ್ಟದಲ್ಲಿ ವಾಸ್ತವ್ಯ.!

ಬೆಂಗಳೂರು : ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ದೋಸ್ತಿಗಳು ಮೈಸೂರು ಚಲೋ ಪಾದಯಾತ್ರೆ ನಡೆಸುತ್ತಿದ್ದಾರೆ. ಕೆಂಗಲ್ ನಿಂದ ಇಂದು ಮತ್ತೆ ಪಾದಯಾತ್ರೆ ಆರಂಭವಾಗಿದ್ದು, 3 ನೇ ದಿನದ ಪಾದಯಾತ್ರೆಗೆ ಬಿ,ವೈ ವಿಜಯೇಂದ್ರ ಚಾಲನೆ ನೀಡಿದ್ದಾರೆ.

ಕೆಂಗಲ್ ನಿಂದ ನಿಡಘಟ್ಟದವರೆಗೆ ಇಂದು ಪಾದಯಾತ್ರೆ ಸಾಗಲಿದ್ದು, ನಿಡಘಟ್ಟದಲ್ಲಿ ನಾಯಕರು ವಾಸ್ತವ್ಯ ಹೂಡಲಿದ್ದಾರೆ.

ಪಾದಯಾತ್ರೆಯಲ್ಲಿ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಕುಮಾರಸ್ವಾಮಿ, ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತಿತರರಿದ್ದಾರೆ. ಮೊದಲನೇ ದಿನ ಬೆಂಗಳೂರಿನ ಕೆಂಗೇರಿ ಬಳಿ ಕೆಂಪಮ್ಮ ದೇವಸ್ಥಾನದ ಬಳಿ ನಗಾರಿ ಬಾರಿಸುವ ಮೂಲಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಮಾಜಿ ಸಿಎಂ, ಕೇಂದ್ರ ಮಂತ್ರಿ HD ಕುಮಾರಸ್ವಾಮಿ ಅವರು ಪಾದಯಾತ್ರೆಗೆ ಚಾಲನೆ ನೀಡಿದ್ದರು. ಇದಾದ ಬಳಿಕ ಬಿಜೆಪಿ-ಜೆಡಿಎಸ್ ನಾಯಕರು ಒಟ್ಟಾಗಿ ಪಾದಯಾತ್ರೆ ಹೊರಟಿದ್ದರು.

ಕಾರ್ಯಕರ್ತರೊಂದಿಗೆ ರಾತ್ರಿಯಾದರು ಕುಗ್ಗದೆ ವಿಶ್ವಾಸಪೂರ್ಣ ಹೆಜ್ಜೆಯೊಂದಿಗೆ ಭ್ರಷ್ಟ ಕಾಂಗ್ರೆಸ್ ತೊಲಗಿಸಲು ಮೈಸೂರು ಚಲೋ. 3ನೇ ದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೆಜ್ಜೆ ಹಾಕೋಣ ಎಂದು ಬಿಜೆಪಿ ಕೆಲವು ಟ್ವೀಟ್ ಹಂಚಿಕೊಂಡಿದೆ.

https://twitter.com/BJP4Karnataka/status/1820329130350534875

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read