alex Certify ‘KSRTC’ ಯಿಂದ 2 ವಿಶೇಷ ಪ್ರವಾಸಿ ತಾಣಗಳಿಗೆ ಪ್ಯಾಕೇಜ್ ಟೂರ್, ಟಿಕೆಟ್ ಬೆಲೆ ಎಷ್ಟು ತಿಳಿಯಿರಿ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘KSRTC’ ಯಿಂದ 2 ವಿಶೇಷ ಪ್ರವಾಸಿ ತಾಣಗಳಿಗೆ ಪ್ಯಾಕೇಜ್ ಟೂರ್, ಟಿಕೆಟ್ ಬೆಲೆ ಎಷ್ಟು ತಿಳಿಯಿರಿ.!

ಡಿಜಿಟಲ್ ಡೆಸ್ಕ್ : ಸೋಮನಾಥಪುರ ಟೂರ್ ಪ್ಯಾಕೇಜ್ ಮತ್ತು ಜೋಗ ಟೂರ್ ಪ್ಯಾಕೇಜ್ ಅನ್ನು KSRTC ರೂಪಿಸಿದೆ.

ಬೆಂಗಳೂರು – ಜೋಗ ಜಲಪಾತ ಮಾರ್ಗದ ಪ್ಯಾಕೇಜ್ನಡಿ ಶಿವಮೊಗ್ಗ, ಸಾಗರ ಮಾರ್ಗವಾಗಿ ನಾನ್ ಎಸಿ ಸ್ಲೀಪರ್ ಬಸ್ ಸಂಚರಿಸಲಿದೆ. ಸಾಗರ, ವರದಹಳ್ಳಿ, ವರದಾಮೂಲ, ಇಕ್ಕೇರಿ, ಕೆಳದಿ, ಜೋಗ ಜಲಪಾತಕ್ಕೆ ಭೇಟಿ ನೀಡಲಿದೆ. ಪ್ರತಿ ಶುಕ್ರವಾರ – ಶನಿವಾರ ಈ ಪ್ರವಾಸ ಇರಲಿದ್ದು, ಜುಲೈ 19 ರಂದು ಆರಂಭಗೊಳ್ಳಲಿದೆ. ವಯಸ್ಕರಿಗೆ 3,000 ರೂ. ಹಾಗೂ 12 ವರ್ಷದೊಳಗಿನ ಮಕ್ಕಳಿಗೆ 2,800 ರೂ. ದರ ನಿಗದಿ ಮಾಡಲಾಗಿದೆ.

ಬೆಂಗಳೂರು – ಸೋಮನಾಥಪುರ – ತಲಕಾಡು – ಮಧ್ಯರಂಗ – ಭರಚುಕ್ಕಿ – ಗಗನಚುಕ್ಕಿ ಮಾರ್ಗದ ಪ್ಯಾಕೇಜ್ ಪ್ರವಾಸವು ಪ್ರತಿ ಶನಿವಾರ – ಭಾನುವಾರ ಇರಲಿದ್ದು, ಜುಲೈ 20 ರಿಂದ ಆರಂಭಗೊಳ್ಳಲಿದೆ. ವಯಸ್ಕರಿಗೆ 500 ರೂ. ಹಾಗೂ 12 ವರ್ಷದೊಳಗಿನ ಮಕ್ಕಳಿಗೆ 350 ರೂ. ನಿಗದಿ ಮಾಡಲಾಗಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...