ಬೆಂಗಳೂರು : ಬಿಜೆಪಿ ಅಧಿಕಾರದಲ್ಲಿದ್ದಾಗ ಅವರೇ ಬದಲಿ ನಿವೇಶನ ಕೊಟ್ಟು, ಈಗ ಅಕ್ರಮ ಆಗಿದೆ ಅಂದ್ರೆ ಹೇಗಪ್ಪಾ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಮುಡಾ ಹಗರಣದ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ ನನ್ನ ಪತ್ನಿಗೆ ಸೇರಿದ್ದ 3 ಎಕರೆ 16 ಗುಂಟೆ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು, ಅದಕ್ಕೆ ಬದಲಾಗಿ ನಿವೇಶನ ಕೊಟ್ಟಿದ್ದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವರು. ನಮಗೆ ಬದಲಿ ನಿವೇಶನ ಕೊಟ್ಟಿದ್ದನ್ನು ವಾಪಾಸು ಪಡೆದು ನಮ್ಮ ಜಮೀನಿನ ಮೌಲ್ಯದ ಹಣವನ್ನೇ ಕೊಡಲಿ, ನಾನೇನಾದ್ರೂ ಬೇಡ ಅಂತ ಹೇಳಿದ್ದೀನಾ?
ನಮ್ಮ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು, ಬೇರೆಯವರಿಗೆ ನಿವೇಶನ ಮಾಡಿ ಹಂಚಿದ್ರು. ನಮಗೆ ಬದಲಿ ನಿವೇಶನವನ್ನು ಇಂಥಾ ಕಡೆಯಲ್ಲೇ ಕೊಡಿ ಎಂದು ಕೇಳಿದ್ವಾ? ವಿಜಯನಗರದ ಮೂರನೇ ಹಂತವೋ, ನಾಲ್ಕನೇ ಹಂತವೋ, ಎಲ್ಲಿ ಕೊಡಬೇಕು ಎನ್ನುವುದು ಅವರಿಗೆ ಬಿಟ್ಟುದ್ದು, ಕೊಟ್ಟಿದ್ದಾರೆ. 2021 ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಅವರೇ ಬದಲಿ ನಿವೇಶನ ಕೊಟ್ಟು, ಈಗ ಅಕ್ರಮ ಆಗಿದೆ ಅಂದ್ರೆ ಹೇಗಪ್ಪಾ? ನಾವು ನಮ್ಮ ಜಮೀನನ್ನು ಸುಮ್ಮನೆ ಬಿಟ್ಟುಕೊಡ್ಬೇಕಿತ್ತಾ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.