ನವದೆಹಲಿ : ಲಾಲ್ ಬಾಗ್ ನಲ್ಲಿ ಈ ಬಾರಿಯ ಸ್ವಾತಂತ್ರೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರಾರಾಜಿಸಲಿದ್ದಾರೆ.
ಅಂಬೇಡ್ಕರ್ ಥೀಮ್ನಡಿ ಫಲಪುಷ್ಪ ಪ್ರದರ್ಶನ ನಡೆಸಲು ರಾಜ್ಯ ತೋಟಗಾರಿಕೆ ಇಲಾಖೆ ತೀರ್ಮಾನಿಸಿದೆ. ಅಂಬೇಡ್ಕರ್ ಅವರ ಪ್ರತಿಮೆ, ಸಂವಿಧಾನ ಕೃತಿ, ಅವರು ಬಾಳಿ ಬದುಕಿದ ಮನೆ, ಅವರ ಆದರ್ಶಗಳನ್ನು ಹೂಗಳಲ್ಲಿ ಅನಾವರಣಗೊಳಿಸುವ ಮೂಲಕ ಪ್ರದರ್ಶನವನ್ನು ಅಂದಗೊಳಿಸಲಾಗುತ್ತದೆ.
ಪ್ರತಿ ವರ್ಷ ಎರಡು ಬಾರಿ ಬೆಂಗಳೂರಿನ ಲಾಲ್ಬಾಗ್ನಲ್ಲಿ ಫ್ಲವರ್ ಶೋ ನಡೆಯುತ್ತಿದೆ. ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಫ್ಲವರ್ ಶೋ ನಡೆಸಲಾಗುತ್ತದೆ. 2ಬಾರಿ ಸತತ 15 ದಿನ ಶೋ ನಡೆಯುತ್ತದೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೂ ಪ್ರದರ್ಶನ ವೀಕ್ಷಣೆಗೆ ಅವಕಾಶ ಇರುತ್ತದೆ. ವಯಸ್ಕರಿಗೆ 80 ರೂ ಹಾಗೂ ಶಾಲಾ ಮಕ್ಕಳಿಗೆ ಉಚಿತ ಟಿಕೆಟ್ ದರ ಇರುತ್ತದೆ. ಫ್ಲವರ್ ಶೋ ದಿನಾಂಕವನ್ನು ಇನ್ನೂ ತೋಟಗಾರಿಕೆ ಇಲಾಖೆ ಫೈನಲ್ ಮಾಡಿಲ್ಲ.