ಬೆಂಗಳೂರು : ‘ರೀಲ್ಸ್’ ಶೋಕಿಗಾಗಿ ನಕಲಿ ಗನ್ ಬಳಕೆ ಸಂಬಂಧ ಕೆಜಿಎಫ್ ಚಿತ್ರದ ತಂತ್ರಜ್ಞನಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ನಕಲಿ ಎಕೆ-47 ರೈಫಲ್ಸ್ ಹಾಗೂ ಬಾಡಿಗಾರ್ಡ್ ಜೊತೆ ರೀಲ್ಸ್ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾಗಿರುವ ಸ್ಟಾರ್ ಅರುಣ್ ಕೊಟಾರೆಗೆ ನಕಲಿ ಗನ್ ಪೂರೈಸಿದ್ದೇ ಸಿನಿಮಾದ ಟೆಕ್ನಿಷಿಯನ್ ಎಂಬುದು ತನಿಖೆ ವೇಳೆ ಬಯಲಾಗಿದೆ.
ಈ ಹಿನ್ನೆಲೆ ತಂತ್ರಜ್ಞ ಸಾಹಿಲ್ ಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಕೆಜಿಎಫ್, ಕಬಬ್ಜ, ಭೈರತಿ ರಣಗಲ್ ಸೇರಿ ಹಲವು ಸಿನಿಮಾಗಳಿಗೆ ತಂತ್ರಜ್ಞನಾಗಿ ಕೆಲಸ ಮಾಡಿದ್ದ ಸಾಹಿಲ್ ಗೆ ಕೊತ್ತನೂರು ಪೊಲೀಸರು ನೋಟಿಸ್ ನೀಡಿದ್ದಾರೆ.
ಅರುಣ್ ಕೊಟಾರೆ ಬಾಡಿಗಾರ್ಡ್ ಥರ ಕೆಲವರನ್ನು ಇಟ್ಟುಕೊಂಡು ಅವರ ಕೈಗೆ ಎಕೆ 47 ಗನ್ ಕೊಟ್ಟು ಶೋ ಕೊಡುತ್ತಿದ್ದನು. ಅಲ್ಲದೇ ಮೈ ಮೇಲೆ ನಕಲಿ ಚಿನ್ನ ಧರಿಸಿಕೊಂಡು ಶೋ ಕೊಡುತ್ತಾ ಜನರನ್ನು ಬೆದರಿಸುತ್ತಿದ್ದನು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಆರ್ಮ್ಸ್ ಕಾಯಿದೆಯಡಿ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿ ಈತನನ್ನು ಬಂಧಿಸಿದ್ದರು.