ನವದೆಹಲಿ : ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮೇಘಾಲಯ, ಮಣಿಪುರ ಮತ್ತು ಮಿಜೋರಾಂ ಸೇರಿದಂತೆ ಹಲವು ಕಡೆ ನಿರಂತರ ಮಳೆಯಾಗಿದ್ದು, ಮತ್ತು ಪ್ರವಾಹದಿಂದ ಬಾಧಿತವಾದ ಈಶಾನ್ಯ ರಾಜ್ಯಗಳಿಗೆ ಅಲರ್ಟ್ ಘೋಷಿಸಲಾಗಿದೆ.
ಈ ವರ್ಷದ ಅಸ್ಸಾಂನ ಪ್ರವಾಹವು ತಿನ್ಸುಕಿಯಾ ಜಿಲ್ಲೆಯಲ್ಲಿ ಮಂಗಳವಾರ ಇಬ್ಬರು ಸೇರಿದಂತೆ 38 ಜನರನ್ನು ಬಲಿ ತೆಗೆದುಕೊಂಡಿದೆ. ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮೇಘಾಲಯ, ಮಣಿಪುರ ವಿವಿಧ ಕಡೆ ಸೇರಿ ಸಾವಿನ ಸಂಖ್ಯೆ 56ಕ್ಕೆ ಏರಿಕೆಯಾಗಿದೆ.
ನಿನ್ನೆಯವರೆಗೆ, ತೌಬಾಲ್, ಇಂಫಾಲ್, ಇರಿಲ್ ಮತ್ತು ಅರುಣಾಚಲ ಪ್ರದೇಶ ಸೇರಿದಂತೆ ಮಣಿಪುರದ ಪ್ರಮುಖ ನದಿಗಳು ಭಾರಿ ಮಳೆಯಿಂದಾಗಿ ಅಪಾಯದ ಮಿತಿಯನ್ನು ಮೀರಿ ಹರಿಯುತ್ತಿವೆ.ಸೇನಾಪತಿ ಜಿಲ್ಲೆಯಲ್ಲಿ ಒಂದು ಸಾವು ದಾಖಲಾಗಿದ್ದು, ಒಬ್ಬ ವ್ಯಕ್ತಿ ಕಾಣೆಯಾಗಿದ್ದಾನೆ. ಮಂಗಳವಾರ ಸಂಭವಿಸಿದ ಭೂಕುಸಿತವು ಐಜ್ವಾಲ್ನ ಹೊರವಲಯದಲ್ಲಿರುವ ದಂಪತಿಗಳ ತಗಡಿನ ಛಾವಣಿಯ ಕಾಂಕ್ರೀಟ್ ಕಟ್ಟಡವನ್ನು ಭಾಗಶಃ ಹೂತುಹಾಕಿದ್ದು, ಅವರು ಮತ್ತು ಅವರ 4 ವರ್ಷದ ಮಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.