ಬೆಂಗಳೂರು : ತಾಯಿ ಜನ್ಮ ನೀಡಿದರೆ, ವೈದ್ಯರು ಪುನರ್ಜನ್ಮ ನೀಡುವರು. ಇದೇ ಕಾರಣಕ್ಕೆ ವೈದ್ಯವೃತ್ತಿಯನ್ನು ಇತರೆ ಎಲ್ಲಾ ವೃತ್ತಿಗಳಿಗಿಂತ ಅತ್ಯಂತ ಶ್ರೇಷ್ಠವೆಂದು ಭಾವಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಪೋಸ್ಟ್ ಹಂಚಿಕೊಂಡಿದ್ದಾರೆ.
ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ ತಾಯಿ ಜನ್ಮ ನೀಡಿದರೆ, ವೈದ್ಯರು ಪುನರ್ಜನ್ಮ ನೀಡುವರು. ಇದೇ ಕಾರಣಕ್ಕೆ ವೈದ್ಯವೃತ್ತಿಯನ್ನು ಇತರೆ ಎಲ್ಲಾ ವೃತ್ತಿಗಳಿಗಿಂತ ಅತ್ಯಂತ ಶ್ರೇಷ್ಠವೆಂದು ಭಾವಿಸಲಾಗುತ್ತಿದೆ.
ತನ್ನ ಬಳಿ ಬರುವ ವ್ಯಕ್ತಿ ಬಡವನೊ – ಶ್ರೀಮಂತನೊ, ಮೇಲ್ಜಾತಿಯೊ – ಕೆಳಜಾತಿಯೊ, ಸ್ವಧರ್ಮವೊ – ಪರ ಧರ್ಮವೊ ಈ ಯಾವುದರ ಭೇದ ಭಾವವಿಲ್ಲದೆ ಪ್ರತಿಯೊಬ್ಬರನ್ನೂ ಸಮಾನ ಆರೈಕೆ ಮಾಡುವ, ರೋಗಿಯ ಪ್ರಾಣ ರಕ್ಷಣೆಗಾಗಿ ಹಗಲಿರುಳೆನ್ನದೆ ದುಡಿಯುತ್ತಿರುವ ನಾಡಿನ ಸಮಸ್ತ ವೈದ್ಯ ಸಮೂಹಕ್ಕೆ ರಾಷ್ಟ್ರೀಯ ವೈದ್ಯರ ದಿನದ ಶುಭಾಶಯಗಳು. ವೈದ್ಯರ ಸೇವೆ – ಸಮರ್ಪಣಾಭಾವವನ್ನು ಈ ದಿನ ನಾವೆಲ್ಲರೂ ಅತ್ಯಂತ ಗೌರವದಿಂದ ಸ್ಮರಿಸೋಣ ಎಂದು ಟ್ವೀಟ್ ಮಾಡಿದ್ದಾರೆ.