ಡಿಜಿಟಲ್ ಡೆಸ್ಕ್ : ‘ಪಿಎಂ ಆವಾಸ್’ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತವಾಗಿ ಮನೆ ಪಡೆದುಕೊಳ್ಳಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಏನೇನು ಎಂಬುದನ್ನು ತಿಳಿಯೋಣ . ಈ ಯೋಜನೆ ಅಡಿಯಲ್ಲಿ ಮನೆ ಕಟ್ಟಿಸಿಕೊಳ್ಳಲು 1,70,000 ರೂಪಾಯಿ ಹಣ ಹಾಗೂ ಈ ಯೋಜನೆ ಅಡಿಯಲ್ಲಿ 600000 ವರೆಗೆ ಕಡಿಮೆ ಬಡ್ಡಿ ದರದ ವರೆಗೆ ಸಾಲ ಸಿಗುತ್ತದೆ.
ಬಡ ಕುಟುಂಬಗಳಿಗೆ ಆಶ್ರಯವನ್ನು ನಿರ್ಮಿಸಲು ಆರ್ಥಿಕ ಸಹಾಯವನ್ನು ನೀಡುವುದು ಯೋಜನೆಯನ್ನು ಗ್ರಾಮೀಣ ಭಾಗದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಎಂದು ಮತ್ತು ಅರ್ಬನ್ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅರ್ಬನ್ ಎಂದು ನಡೆಸಲಾಗುತ್ತದೆ.
ಬೇಕಾಗುವ ದಾಖಲೆಗಳು
* ಆಧಾರ್ ಕಾರ್ಡ್
* ಜಾತಿ ಪ್ರಮಾಣ ಪತ್ರ
* ಆದಾಯ ಪ್ರಮಾಣ ಪತ್ರ
*ಬ್ಯಾಂಕ್ ಪಾಸ್ ಬುಕ್
* ರೇಷನ್ ಕಾರ್ಡ್
* ಮೊಬೈಲ್ ನಂಬರ್
* ಇತ್ತೀಚಿನ ಫೋಟೋ
ಅರ್ಜಿ ಸಲ್ಲಿಸುವುದು ಹೇಗೆ..?
ಆಸಕ್ತರು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಕಂಡೀಷನ್
ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಕುಟುಂಬವು BPL ರೇಷನ್ ಕಾರ್ಡ್ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಭಾರತದ ನಿವಾಸಿಯಾಗಿರಬೇಕು.
ಅರ್ಜಿ ಸಲ್ಲಿಸಲು ಕುಟುಂಬದ ಹಾರ್ದಿಕ ವೇತನ 3 ಲಕ್ಷದಿಂದ 6 ಲಕ್ಷದ ಒಳಗೆ ಇರಬೇಕು.
ಸ್ವಂತ ಮನೆಯನ್ನು ಹೊಂದಿರಬಾರದು