HomeBusinessBig Shock: 5 ವರ್ಷದಲ್ಲಿ ಕರ್ನಾಟಕದಿಂದ 629 ಕಂಪನಿ ಬೇರೆ ರಾಜ್ಯಕ್ಕೆ ಶಿಫ್ಟ್

Big Shock: 5 ವರ್ಷದಲ್ಲಿ ಕರ್ನಾಟಕದಿಂದ 629 ಕಂಪನಿ ಬೇರೆ ರಾಜ್ಯಕ್ಕೆ ಶಿಫ್ಟ್

ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಆಗುತ್ತಿದೆ. ವಿವಿಧ ಕಂಪನಿಗಳು ರಾಜ್ಯದಲ್ಲಿ ತಮ್ಮ ಘಟಕ ಸ್ಥಾಪನೆಯಾಗುತ್ತಿವೆ ಎಂದು ಹೇಳುತ್ತಿವೆ. ಆದರೆ ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ ಕಳೆದ 5 ವರ್ಷಗಳಲ್ಲಿ ಕರ್ನಾಟಕದಿಂದ ಇತರ ರಾಜ್ಯಗಳಿಗೆ 629 ಕಂಪನಿಗಳು ತಮ್ಮ ನೋಂದಾಯಿತ ಕಚೇರಿಗಳನ್ನು ಸ್ಥಳಾಂತರಿಸಿವೆ.

ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಲೋಕಸಭೆಯಲ್ಲಿ ಕೇಳಿದ್ದ ಪ್ರಶ್ನೆಗೆ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಖಾತೆ ರಾಜ್ಯ ಸಚಿವ ಹರ್ಷ ಮಲ್ಹೋತ್ರಾ ಉತ್ತರ ನೀಡಿದ್ದು, ಕಳೆದ ಐದು ವರ್ಷಗಳಲ್ಲಿ 629 ಕಂಪನಿಗಳು ತಮ್ಮ ನೋಂದಾಯಿತ ಕಚೇರಿಗಳನ್ನು ಕರ್ನಾಟಕದಿಂದ ಇತರ ರಾಜ್ಯಗಳಿಗೆ ಸ್ಥಳಾಂತರಿಸಿವೆ ಎಂದು ಹೇಳಿದ್ದಾರೆ.

ಯಾವ ವರ್ಷ ಎಷ್ಟು?: ಕೇಂದ್ರ ಸಚಿವರು ತಮ್ಮ ಉತ್ತರದಲ್ಲಿ ಯಾವ ವರ್ಷ ಎಷ್ಟು ಕಂಪನಿಗಳು ಕರ್ನಾಟಕದಿಂದ ಬೇರೆ ರಾಜ್ಯಕ್ಕೆ ಸ್ಥಳಾಂತರಗೊಂಡಿವೆ? ಎಂದು ಮಾಹಿತಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • 2020-21-129
  • 2021-22- 216
  • 2022-23 – 88
  • 2023-24 – 119
  • 2024-25 – 167

ಸಚಿವರು ಉತ್ತರದಲ್ಲಿ, “ಆಡಳಿತಾತ್ಮಕ ಮತ್ತು ಕಾರ್ಯಾಚರಣೆಯ ಅನುಕೂಲಕ್ಕಾಗಿ ಹಾಗೂ ವ್ಯವಹಾರ ಚಟುವಟಿಕೆಗಳನ್ನು ವಿಸ್ತರಿಸುವ ಉದ್ದೇಶದಿಂದ ಕಂಪನಿಗಳು ತಮ್ಮ ಕಚೇರಿಗಳನ್ನು ಸ್ಥಳಾಂತರಿಸಿವೆ” ಎಂದು ಹೇಳಿದ್ದಾರೆ.


For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular