HomeInternationalಮನೆ, ಅಂಗಡಿ, ಕಾರ್ ನಲ್ಲೇ ಶವಗಳು ಪತ್ತೆ: ಅಮೆರಿಕದಲ್ಲಿ ಮತ್ತೆ ಶೂಟೌಟ್ ಗೆ 6 ಜನ...

ಮನೆ, ಅಂಗಡಿ, ಕಾರ್ ನಲ್ಲೇ ಶವಗಳು ಪತ್ತೆ: ಅಮೆರಿಕದಲ್ಲಿ ಮತ್ತೆ ಶೂಟೌಟ್ ಗೆ 6 ಜನ ಬಲಿ

ಅಮೆರಿಕದ ಮಿಸ್ಸಿಸ್ಸಿಪ್ಪಿ ರಾಜ್ಯದ ಸಣ್ಣ ಗ್ರಾಮೀಣ ಪಟ್ಟಣದಲ್ಲಿ ಶುಕ್ರವಾರ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಅರ್ಕಾಬುಟ್ಲಾದ ಹಲವಾರು ಸ್ಥಳಗಳಲ್ಲಿ ಜನ ಕೊಲ್ಲಲ್ಪಟ್ಟಿದ್ದಾರೆ. ಮೂವರು ಎರಡು ಮನೆಗಳಲ್ಲಿ ಶವವಾಗಿ ಕಂಡುಬಂದರೆ, ಇತರರು ಅಂಗಡಿಯೊಳಗೆ, ಕಾರ್ ನಲ್ಲಿ ಮತ್ತು ರಸ್ತೆಯಲ್ಲಿ ಪತ್ತೆಯಾಗಿದ್ದಾರೆ. ಏಕೈಕ ಶಂಕಿತನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟೇಟ್ ಕೌಂಟಿ ಶೆರಿಫ್ ಕಚೇರಿಯು ಆರೋಪಿಯನ್ನು 52 ವರ್ಷದ ಸ್ಥಳೀಯ ನಿವಾಸಿ ಎಂದು ಗುರುತಿಸಿದೆ. ಮೆಂಫಿಸ್ ಮೂಲದ ಟಿವಿ ಸ್ಟೇಷನ್ ಆಕ್ಷನ್ ನ್ಯೂಸ್ 5 ಆಪಾದಿತ ಶೂಟರ್ ಅನ್ನು ರಿಚರ್ಡ್ ಡೇಲ್ ಕ್ರಂ ಎಂದು ಗುರುತಿಸಿದೆ.

ಮಿಸ್ಸಿಸ್ಸಿಪ್ಪಿ ಗವರ್ನರ್ ಟೇಟ್ ರೀವ್ಸ್ ಶುಕ್ರವಾರ ಟ್ವೀಟ್ ಮಾಡಿ, ಅವನ ಉದ್ದೇಶ ಇನ್ನೂ ತಿಳಿದಿಲ್ಲ. ಒಬ್ಬನೇ ಕೃತ್ಯವೆಸಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ರಾಜ್ಯ ತನಿಖಾ ಸಂಸ್ಥೆಯು ತನಿಖೆಗೆ ಪೊಲೀಸರಿಗೆ ಸಹಾಯ ಮಾಡುತ್ತಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular