HomeEntertainmentಸಿನಿ ಪ್ರೇಕ್ಷಕರ ಗಮನ ಸೆಳೆದ '4N6'

ಸಿನಿ ಪ್ರೇಕ್ಷಕರ ಗಮನ ಸೆಳೆದ ‘4N6’

ಕಳೆದ ವಾರ ಮೇ ಹತ್ತರಂದು ರಾಜ್ಯಾದ್ಯಂತ ತೆರೆ ಕಂಡಿದ್ದ ದರ್ಶನ್ ಶ್ರೀನಿವಾಸ್ ನಿರ್ದೇಶನದ ‘4N6’ ಚಿತ್ರ ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. ಈ ಸಿನಿಮಾದಲ್ಲಿ ಬರುವ ಒಂದರ ಮೇಲೊಂದು ತಿರುವುಗಳು ಪ್ರೇಕ್ಷಕರ ಗಮನ ಸೆಳೆದಿದ್ದು, ಹೊಸ ಪ್ರತಿಭೆಗಳ ಅದ್ಭುತ ನಟನೆಗೆ  ಬಹುಪರಾಕ್ ಎಂದಿದ್ದಾರೆ.

ಮರ್ಡರ್ ಮಿಸ್ಟರಿ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ರಚನಾ ಇಂದರ್ ಸೇರಿದಂತೆ ಭವಾನಿ ಪ್ರಕಾಶ್, ನವೀನ್ ಕುಮಾರ್,ಸಂಜಯ್ ನಾಯಕ್, ಬೇಬಿ ವಂಶಿಕಾ, ಆಧ್ಯಾ ಶೇಖರ್, ಅರ್ಜುನ್, ಸೌರವ್ ಪ್ರಕಾಶ್, ಆಶಿತಾ ತೆರೆ ಹಂಚಿಕೊಂಡಿದ್ದು, ಪರ್ಪಲ್ ಪ್ಯಾಚ್ ಪಿಚ್ಚರ್ಸ್ ಬ್ಯಾನರ್ ನಲ್ಲಿ ಸಾಯಿ ಪ್ರೀತಿ ನಿರ್ಮಾಣ ಮಾಡಿದ್ದಾರೆ. ಚರಣ್ ರಾಜ್ ಛಾಯಾಗ್ರಹಣ, ರಾಜು ನೃತ್ಯ ನಿರ್ದೇಶನ, ಸತ್ಯ ಕಹಿ ಅವರ ಸಂಭಾಷಣೆ ಮತ್ತು ಸಾಯಿ ಸೋಮೇಶ್ ಅವರ ಸಂಗೀತವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular