HomeEntertainmentBIG NEWS: ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ನಟ ಚೇತನ್ ಚಂದ್ರ ಸೇರಿದಂತೆ ಮೂವರ ವಿರುದ್ಧ...

BIG NEWS: ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ನಟ ಚೇತನ್ ಚಂದ್ರ ಸೇರಿದಂತೆ ಮೂವರ ವಿರುದ್ಧ FIR ದಾಖಲು; ಇಬ್ಬರು ಅರೆಸ್ಟ್

ಬೆಂಗಳೂರು: ನಟ ಚೇತನ್ ಚಂದ್ರ ಮೇಲೆ 20 ಜನರಿಂದ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಗ್ಗಲಿಪುರ ಠಾಣೆ ಪೊಲೀಸರು ಇಬ್ಬರ ಬಂಧಿಸಿದ್ದಾರೆ. ಈ ನಡುವೆ ಇದೇ ಪ್ರಕರಣದಲ್ಲಿ ನಟ ಚೇತನ್ ಚಂದ್ರ ಸೇರಿದಂತೆ ಮೂವರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ನಟ ಚೇತನ್ ಚಂದ್ರ ಮೇಲೆ ಹಲ್ಲೆ ಪ್ರಕರಣದಲ್ಲಿ ಪೊಲೀಸರು ಕಿರಣ್ ಹಾಗೂ ಹರೀಶ್ ಎಂಬುವವರನ್ನು ಬಂಧಿಸಿದ್ದಾರೆ. ಇನ್ನೊಂದೆಡೆ ಹಲ್ಲೆಗೊಳಗಾಗಿರುವ ಚೇತನ್ ಚಂದ್ರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಮಧ್ಯೆ ಹಲ್ಲೆ ಆರೋಪದಲ್ಲಿ ಬಂಧಿಸಲ್ಪಟ್ಟ ಕಿರಣ್ ಎಂಬುವವರ ಪತ್ನಿ ಐಶ್ವರ್ಯ, ನಟ ಚೇತನ್ ಚಂದ್ರ ಹಾಗೂ ಇನ್ನಿಬ್ಬರ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ. ನಿನ್ನೆ ರಾತ್ರಿ ಬೈಕ್ ನಲ್ಲಿ ಬರುವಾಗ ಸೈಡ್ ತೆಗೆದುಕೊಂಡಿದ್ದಕ್ಕೆ ಚೇತನ್ ಚಂದ್ರ ಕೋಪಗೊಂಡು ನನ್ನ ಪತಿಗೆ ಮಧ್ಯದ ಬೆರಳು ತೋರಿಸಿದ್ದಾರೆ. ಬಳಿಕ ನನ್ನ ಪತಿ ಬೇಕರಿ ಬಳಿ ಬೈಕ್ ನಿಲ್ಲಿಸುತ್ತಿದ್ದಂತೆ ಹಿಂದಿನಿಂದ ಬಂದು ಡಿಕ್ಕಿಹೊಡೆದಿದ್ದಾರೆ. ಈ ವೇಳೆ ನಾನು ಹೋಗಿ ಕ್ಷಮೆ ಕೇಳಿದರೂ ನನ್ನ ಮೇಲೇ ಚೇತನ್ ಹೊಡೆದಿದ್ದಾರೆ. ಚೇತನ್ ನನ್ನ ಹಾಗೂ ನನ್ನ ಪತಿ ಕಿರಣ್ ಮೇಲೆ ಹಲ್ಲೆ ನಡೆಸಿದ್ದಾರೆ. ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದಂತೆ ಜನರು ಚೇತನ್ ಗೆ ಹೊಡೆದಿದ್ದಾರೆ ಎಂದು ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿನ್ನೆಲೆಯಲ್ಲಿ ನಟ ಚೇತನ್ ಚಂದ್ರ ಹಾಗೂ ಅವರ ಜೊತೆಗಿದ್ದ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 323, 354, 34ರಡಿಯಲ್ಲಿ ಎಫ್ಐಆರ್ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular