ನಮ್ಮ ದೇಶದಲ್ಲಿ ಮದುವೆ ಇರಲಿ, ಹಬ್ಬ ಇರಲಿ ಅಥವಾ ಸ್ವಲ್ಪ ದುಡ್ಡು ಉಳಿಸಬೇಕು ಅಂದರೂ ಮೊದಲು ನೆನಪಾಗೋದು ಚಿನ್ನನೇ. ಆದ್ರೆ ಬಂಗಾರ ತಗೋಬೇಕಾದ್ರೆ ಸರಿಯಾಗಿ ಗೊತ್ತಿಲ್ಲದೆ ಹೋದ್ರೆ ಲಾಭದ ಬದಲು ಕೈ ಸುಟ್ಟುಕೊಳ್ಳೋ ಚಾನ್ಸಸ್ ಜಾಸ್ತಿ ಇರುತ್ತೆ.ಕೇವಲ 4 ದಿನಗಳಲ್ಲಿ ಚಿನ್ನದ ಬೆಲೆ 28 ಸಾವಿರ ರೂ. ಹಾಗೂ ಬೆಳ್ಳಿ ಬೆಲೆ ಲಕ್ಷಕ್ಕೂ ಅಧಿಕ ಇಳಿಕೆಯಾಗಿರುವುದು ಎಲ್ಲರ ನಿದ್ದೆ ಗೆಡಿಸಿದೆ.ವಿಶೇಷವಾಗಿ ಅಕ್ಷಯ ತೃತೀಯದಂತಹ ಟೈಮಲ್ಲಿ ಟಿವಿ ಪೇಪರ್ ಜಾಹೀರಾತು ನೋಡಿ ಅವಸರದಲ್ಲಿ ಅಂಗಡಿಗೆ ಓಡೋ ಮುನ್ನ ಜನ ಮಾಡೋ ಈ 4 ದೊಡ್ಡ ತಪ್ಪುಗಳ ಬಗ್ಗೆ ಸ್ವಲ್ಪ ಕೇರ್ಫುಲ್ ಆಗಿರಿ
1.ಹೂಡಿಕೆಯ ಉದ್ದೇಶ ತಿಳಿಯದಿರುವುದು (Short-term vs Long-term)
ಬಹಳ ಜನ ಏನೋ ಸ್ವಲ್ಪ ಬೆಲೆ ಏರಿದ ತಕ್ಷಣ ಬಂಗಾರ ತಗೊಂಡು ಬಿಡ್ತಾರೆ ಮತ್ತೆ ಸ್ವಲ್ಪ ರೇಟ್ ಇಳಿದ ಕೂಡಲೇ ಗಾಬರಿಯಾಗಿ ಮಾರಿ ಬಿಡ್ತಾರೆ. ಬಂಗಾರ ಯಾವತ್ತೂ ಲಾಂಗ್-ಟರ್ಮ್ (ದೀರ್ಘಕಾಲದ) ಹೂಡಿಕೆ. ತಕ್ಷಣಕ್ಕೆ ತಗೊಂಡು ತಕ್ಷಣಕ್ಕೆ ಮಾರಿದ್ರೆ ಜಿಎಸ್‌ಟಿ (GST) ಮತ್ತೆ ಮೇಕಿಂಗ್ ಚಾರ್ಜಸ್‌ನಲ್ಲೇ ನಿಮ್ಮ ದುಡ್ಡು ಕಮ್ಮಿ ಆಗುತ್ತೆ.
2.ಬೆಲೆಗಳ ಕಡೆ ಗಮನ ಕೊಡದೆ ಇರೋದು: ಬೆಲೆ ಅತಿಯಾದಾಗ (Peak Price) ಹೋಗಿ ತಗೋಬಾರದು. ಯಾವಾಗಲೂ ಬಂಗಾರದ ರೇಟ್ ಮೇಲೆ ಒಂದು ಕಣ್ಣಿರಲಿ. ಸ್ವಲ್ಪ ರೇಟ್ ಇಳಿದಾಗ ಅಥವಾ ಮಾರ್ಕೆಟ್ ಸ್ಟೇಬಲ್ ಆದಾಗ ತಗೊಂಡ್ರೆ ನಿಮಗೆ ಒಳ್ಳೆ ಲಾಭ ಸಿಗುತ್ತೆ.
3.ತುರ್ತು ನಿಧಿ (Emergency Fund) ಇಲ್ಲದೆ ಹೂಡಿಕೆ ಮಾಡುವುದು
ಅನೇಕರು ತಮ್ಮಲ್ಲಿರುವ ಎಲ್ಲಾ ಹಣವನ್ನು ಚಿನ್ನದ ಮೇಲೆ ಹಾಕಿಬಿಡುತ್ತಾರೆ. ಆದರೆ ಅನಿರೀಕ್ಷಿತವಾಗಿ ವೈದ್ಯಕೀಯ ಖರ್ಚು ಅಥವಾ ಕೆಲಸ ಹೋದಾಗ ಹಣದ ಅವಶ್ಯಕತೆ ಬಿದ್ದಾಗ, ಅನಿವಾರ್ಯವಾಗಿ ಚಿನ್ನವನ್ನು ಕಡಿಮೆ ಬೆಲೆಗೆ ಮಾರಬೇಕಾಗುತ್ತದೆ.
ಮೊದಲು ನಿಮ್ಮ ದೈನಂದಿನ ಮತ್ತು ತುರ್ತು ಖರ್ಚಿಗೆ ಬೇಕಾದ ಹಣವನ್ನು ಪ್ರತ್ಯೇಕವಾಗಿ ಇರಿಸಿ ನಂತರವಷ್ಟೇ ಉಳಿದ ಹಣವನ್ನು ಚಿನ್ನದ ಮೇಲೆ ಹೂಡಿಕೆ ಮಾಡಿ. ಇದರಿಂದ ನೀವು ಚಿನ್ನವನ್ನು ಲಾಭ ಬರುವವರೆಗೆ ದೀರ್ಘಕಾಲ ಇಟ್ಟುಕೊಳ್ಳಬಹುದು.
4.ಎಮರ್ಜೆನ್ಸಿ ಫಂಡ್ (ತುರ್ತು ನಿಧಿ) ಇಲ್ಲದೆ ಹೂಡಿಕೆ ಮಾಡೋದು: ಮನೆಯಲ್ಲಿ ಇರೋ ಅಷ್ಟೂ ದುಡ್ಡನ್ನು ಚಿನ್ನದ ಮೇಲೆ ಹಾಕಬೇಡಿ. ನಾಳೆ ಏನೋ ತುರ್ತು ಮೆಡಿಕಲ್ ಖರ್ಚು ಅಥವಾ ಮನೆಯಲ್ಲಿ ಪ್ರಾಬ್ಲಂ ಆದಾಗ ಕೈಲಿ ದುಡ್ಡಿಲ್ಲದಿದ್ರೆ ಆವಾಗ ತಗೊಂಡಿರೋ ಚಿನ್ನವನ್ನೇ ಕಡಿಮೆ ಬೆಲೆಗೆ ಮಾರಬೇಕಾಗುತ್ತೆ. ಅದಕ್ಕೆ ಮೊದಲು ಸ್ವಲ್ಪ ಕೈಲಿ ದುಡ್ಡಿಟ್ಟುಕೊಂಡು ಆಮೇಲೆ ಚಿನ್ನ ತಗೊಳ್ಳಿ
5.ಶುದ್ಧತೆ ಚೆಕ್ ಮಾಡದೆ ಇರೋದು: ಎಲ್ಲೋ ಕಮ್ಮಿ ರೇಟ್ ಸಿಕ್ತಿದೆ ಅಂತ ಗಲ್ಲಿ ಅಂಗಡಿಗಳಲ್ಲೋ ಅಥವಾ ಗೊತ್ತಿಲ್ಲದ ಜಾಗದಲ್ಲೋ ಬಂಗಾರ ತಗೊಬೇಡಿ. ಆಮೇಲೆ ಅದನ್ನ ಮಾರೋಕೆ ಹೋದಾಗ ಅದು ನಕಲಿ ಅಂತ ಗೊತ್ತಾದ್ರೆ ದೊಡ್ಡ ನಷ್ಟ ಆಗುತ್ತೆ. ಯಾವಾಗಲೂ ಹಾಲ್‌ಮಾರ್ಕ್ (Hallmark) ನೋಡಿ ನಂಬಿಕಸ್ಥ ಅಂಗಡಿಗಳಲ್ಲೇ ತಗೊಳ್ಳಿ.

