2026ರ ಹೊಸ ವರ್ಷದ ಸಂಭ್ರಮದ ನಡುವೆಯೇ, ಸುಮಾರು 29 ವರ್ಷಗಳಷ್ಟು ಹಳೆಯದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. 1997ರಲ್ಲಿ ಶೇಖರ್ ಸುಮನ್ ನಡೆಸಿಕೊಡುತ್ತಿದ್ದ ಜನಪ್ರಿಯ ಟಾಕ್ ಶೋ ‘ಮೂವರ್ಸ್ ಅಂಡ್ ಶೇಕರ್ಸ್’ (Movers and Shakers) ನ ಈ ಕಿರು ದೃಶ್ಯವು ಅಂದಿನ ಕಾಲದ ಜನರ ಸರಳತೆ ಮತ್ತು ಪ್ರಾಮಾಣಿಕತೆಯನ್ನು ನೆನಪಿಸುತ್ತಿದೆ.
ವಿಡಿಯೋದಲ್ಲೇನಿದೆ? ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಸಾಮಾನ್ಯ ಜನರು ತಮ್ಮ ಹೊಸ ವರ್ಷದ ವಿಚಿತ್ರ ಮತ್ತು ತಮಾಷೆಯ ನಿರ್ಧಾರಗಳನ್ನು (New Year Resolutions) ಹಂಚಿಕೊಂಡಿದ್ದಾರೆ:
- ಡಯಟ್ ಮತ್ತು ಪಾವ್ ಭಾಜಿ: ಒಬ್ಬ ಮಹಿಳೆ ನಾನು ಇನ್ಮುಂದೆ ಕಟ್ಟುನಿಟ್ಟಾದ ಡಯಟ್ ಮಾಡುತ್ತೇನೆ, ಚಾಟ್ ಮತ್ತು ಸಿಹಿ ತಿನ್ನುವುದಿಲ್ಲ ಎಂದು ಹೇಳುತ್ತಾರೆ. ಆದರೆ ಮರುಕ್ಷಣವೇ ಅವರು ನಾಲ್ಕು ಪ್ಲೇಟ್ ಪಾವ್ ಭಾಜಿಗೆ ಆರ್ಡರ್ ಮಾಡುವುದು ನೋಡುಗರಿಗೆ ನಗು ತರಿಸುತ್ತದೆ.
- ಬಾಯ್‌ಫ್ರೆಂಡ್-ಗರ್ಲ್‌ಫ್ರೆಂಡ್ ಕ್ರೇಜ್: ಒಬ್ಬ ಯುವತಿ ತನಗೆ “ಸಾಧ್ಯವಾದಷ್ಟು ಹೆಚ್ಚು ಬಾಯ್‌ಫ್ರೆಂಡ್ಸ್ ಬೇಕು” ಎಂದರೆ, ವ್ಯಕ್ತಿಯೊಬ್ಬರು “ತಿಂಗಳಿಗೊಬ್ಬ ಗರ್ಲ್‌ಫ್ರೆಂಡ್ ಬೇಕು” ಎಂದು ತಮಾಷೆ ಮಾಡುತ್ತಾರೆ.
- ಹಣ ಮತ್ತು ಬಟ್ಟೆ: ಒಬ್ಬರು “ಹಣ ಉಳಿಸುತ್ತೇನೆ” ಎಂದರೆ, ಇನ್ನೊಬ್ಬರು “ಹೆಚ್ಚು ಖರ್ಚು ಮಾಡುತ್ತೇನೆ” ಎನ್ನುತ್ತಾರೆ. ಒಬ್ಬ ವ್ಯಕ್ತಿ ನಾನು ಇನ್ಮುಂದೆ “ಜೀನ್ಸ್ ಮತ್ತು ಟಿ-ಶರ್ಟ್” ಧರಿಸುತ್ತೇನೆ ಎಂದು ನಿರ್ಧರಿಸಿದರೆ, ಶಾಲಾ ಬಾಲಕನೊಬ್ಬ “ಶಾಲೆಗೆ ಪುಸ್ತಕ ಹೊತ್ತುಕೊಂಡು ಹೋಗುವುದಿಲ್ಲ” ಎಂದು ಮುಗ್ಧವಾಗಿ ಹೇಳುತ್ತಾನೆ.
90ರ ದಶಕದ ಆಕರ್ಷಣೆ: ಈ ವಿಡಿಯೋ ನೋಡಿದ ಇಂದಿನ ತಲೆಮಾರಿನ ಜನರು ಅಂದಿನ ಕಾಲದ ಜನರ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. “90ರ ದಶಕದ ಜನರು ಎಷ್ಟು ಸಭ್ಯರಾಗಿದ್ದರು, ಎಜುಕೇಟೆಡ್ ಆಗಿದ್ದರು ಮತ್ತು ‘ಚಿಲ್’ ಆಗಿದ್ದರು” ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಇಂದಿನ ಸೋಶಿಯಲ್ ಮೀಡಿಯಾ ಯುಗದಂತೆ ಯಾವುದೇ ಫಿಲ್ಟರ್‌ಗಳಿಲ್ಲದೆ ಜನರು ಎಷ್ಟು ಸಹಜವಾಗಿ ಮತ್ತು ಸ್ಪಷ್ಟವಾಗಿ ಇಂಗ್ಲಿಷ್‌ನಲ್ಲಿ ಸಂವಹನ ನಡೆಸುತ್ತಿದ್ದರು ಎಂಬುದು ಈಗಿನವರನ್ನು ಬೆರಗುಗೊಳಿಸಿದೆ.
“ಅಂದಿನ ಜನರ ಕಣ್ಣಲ್ಲಿ ನಿಜವಾದ ಸಂತೋಷವಿತ್ತು” ಎಂದು ನೆಟ್ಟಿಗರು ಈ ವಿಡಿಯೋವನ್ನು ‘ಇಂಟರ್ನೆಟ್ ಗೋಲ್ಡ್’ ಎಂದು ಕರೆದಿದ್ದಾರೆ.

