HomeLatest NewsBIG NEWS: ಮನೆಗೆ ನುಗ್ಗಿ ಚಿನ್ನಾಭರಣ ವ್ಯಾಪಾರಿ ಹಾಗೂ ಪತ್ನಿಯನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

BIG NEWS: ಮನೆಗೆ ನುಗ್ಗಿ ಚಿನ್ನಾಭರಣ ವ್ಯಾಪಾರಿ ಹಾಗೂ ಪತ್ನಿಯನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

ಭೋಪಾಲ್: ಚಿನ್ನದ ವ್ಯಾಪಾರಿ ಹಾಗೂ ಅವರ ಪತ್ನಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಮಂದ್ಸೌರ್ ನಲ್ಲಿ ನಡೆದಿದೆ.

ಮನೆಗೆ ನುಗ್ಗಿದ ದುಷ್ಕರ್ಮಿಗಳು ಚಿನ್ನದ ವ್ಯಾಪಾರಿ ದಿಲೀಪ್ ಜೈನ್ ಹಾಗೂ ಅವರ ಪತ್ನಿ ರೇಖಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಸ್ಥಳದಲ್ಲೇ ರಾಜಸ್ಥಾನ ಮೂಲದ ವಿಕಾಸ್ ಸೋನಿ ಎಂಬುವವರ ಶವ ಕೂಡ ಪತ್ತೆಯಾಗಿದೆ.

ಗುಂಡಿನ ದಾಳಿ ನಡೆಯುವ ಮುನ್ನ ಮೂವರ ನಡುವೆ ಗಲಾಟೆಯಾಗಿದೆ. ಬಳಿಕ ಮನೆಯೊಳಗೆ ಗುಂಡಿನ ಶಬ್ಧ ಕೇಳಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಕುಮಾರ್ ಮೀನಾ ತಿಳಿಸಿದ್ದಾರೆ. ಘಟನಾ ಸ್ಥಳದಿಂದ ಪೊಲೀಸರು ಒಂದು ಪಿಸ್ತೂಲ್ ಹಾಗೂ ಚಾಕುವನ್ನು ವಶಕ್ಕೆ ಪಡೆದಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಚಿನ್ನದ ವ್ಯಾಪಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದು ಕೊಲೆಯಾಗಿರುವ ಶಂಕೆ ಇದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular