ಅರ್ಹತೆ ಇಲ್ಲದೆ ಇದ್ದರೂ ಬಿಪಿಎಲ್ ಪಟ್ಟಿಯಲ್ಲಿರುವ 14 ಲಕ್ಷ ಕಾರ್ಡ್‌ದಾರರನ್ನು ಹಂತ ಹಂತವಾಗಿ ಎಪಿಎಲ್‌ಗೆ ವರ್ಗಾಯಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರು ತಿಳಿಸಿದ್ದಾರೆ.
ಅರ್ಹ ಬಿಪಿಎಲ್ ಕಾರ್ಡ್‌ದಾರರನ್ನು ಯಾವುದೇ ಕಾರಣಕ್ಕೂ ಬಿಪಿಎಲ್‌ನಿಂದ ಕೈಬಿಡುವುದಿಲ್ಲ. ಒಂದು ವೇಳೆ ಬಿಪಿಎಲ್‌ನಿಂದ ತೆಗೆದು ಹಾಕಿದ್ದರೆ, ತಹಶೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಬೇಕು. ಅವರಿಗೆ ಮತ್ತೆ ಬಿಪಿಎಲ್ ಕಾರ್ಡ್ ಕೊಡುತ್ತೇವೆ ಎಂದು ಹೇಳಿದ್ದಾರೆ.
ಸುಮಾರು 14 ಲಕ್ಷ ಮಂದಿ ಎಪಿಎಲ್ ನವರು ಬಿಪಿಎಲ್ ಕಾರ್ಡ್ ಹೊಂದಿದ್ದು, ಪರಿಷ್ಕರಣೆ ಮಾಡಿ, ಹಂತಹಂತವಾಗಿ ಪಟ್ಟಿಯಿಂದ ತೆಗೆಯಲಾಗುವುದು. ಗೈಡ್‌ಲೈನ್ಸ್ ಮೀರಿ ಎಪಿಎಲ್ನವರು 7 ಲಕ್ಷ ಕಾರ್ಡ್ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡ ಮಾಹಿತಿ ಇದ್ದು, ಪರಿಷ್ಕರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ನಿಜವಾಗಲೂ ಬಿಪಿಎಲ್ ಕಾರ್ಡ್ಗೆ ಯಾರು ಅರ್ಹರಿದ್ದಾರೋ ಅವರ ಹೆಸರು ಡಿಲೀಟ್ ಆಗಲ್ಲ. ಡಿಲೀಟ್ ಆಗಿದ್ದರೆ, ತಹಶೀಲ್ದಾರ್ಗೆ ಅರ್ಜಿ ಹಾಕಬೇಕಿದ್ದು, ಮತ್ತೆ ಬಿಪಿಎಲ್ ಕಾರ್ಡ್ ಕೊಡುತ್ತೇವೆ. ಬಿಪಿಎಲ್ ಗೆ ಯಾರೂ ಅರ್ಹರಲ್ಲವೋ ಅವರು ಎಪಿಎಲ್ ಗೆ ಹೋಗ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.

