HomeLatest Newsಅಬ್ಬಾ..! ನಮ್ಮ ₹1,000ಕ್ಕೆ ಅಲ್ಲಿ ₹1.30 ಲಕ್ಷ.. ಜಸ್ಟ್‌ 3 ಗಂಟೆಗಳಲ್ಲೇ ಹೋಗಬಹುದು; ಈ ದೇಶದ...

ಅಬ್ಬಾ..! ನಮ್ಮ ₹1,000ಕ್ಕೆ ಅಲ್ಲಿ ₹1.30 ಲಕ್ಷ.. ಜಸ್ಟ್‌ 3 ಗಂಟೆಗಳಲ್ಲೇ ಹೋಗಬಹುದು; ಈ ದೇಶದ ಬಗ್ಗೆ ತಿಳಿದುಕೊಳ್ಳಿ..!

ವಿದೇಶಗಳಿಗೆ ತೆರಳಿ ಆನಂದವಾಗಿ ಸಮಯ ಕಳೆಯಬೇಕು ಎಂಬ ಆಸೆ ಬಹುತೇಕ ಎಲ್ಲರಿಗೂ ಇರುತ್ತದೆ. ಆದರೆ ಹೆಚ್ಚಿನ ಖರ್ಚು, ವೀಸಾ ಸಮಸ್ಯೆಗಳ ಭಯದಿಂದ ಅನೇಕರು ತಮ್ಮ ವಿದೇಶ ಪ್ರವಾಸದ ಯೋಜನೆಯನ್ನು ಮುಂದೂಡುತ್ತಾರೆ.

ಆದರೆ ಹೆಚ್ಚು ಖರ್ಚು ಮಾಡದೇ, ಭಾರತಕ್ಕೆ ಅತ್ಯಂತ ಸಮೀಪದಲ್ಲಿರುವ ಅದ್ಭುತ ದೇಶವೊಂದನ್ನು ಕಡಿಮೆ ಬಜೆಟ್‌ನಲ್ಲೇ ಸುತ್ತಿ ಬರಬಹುದು. ಭಾರತದಿಂದ ಕೇವಲ ಮೂರು ಗಂಟೆಗಳ ವಿಮಾನ ಪ್ರಯಾಣದಲ್ಲಿ ತಲುಪಬಹುದಾದ ಆ ದೇಶದ ಬಗ್ಗೆ ಬಹುತೇಕರಿಗೆ ಹೆಚ್ಚು ತಿಳಿದಿಲ್ಲ. ಐತಿಹಾಸಿಕ ವಾಸ್ತುಶಿಲ್ಪ ಹಾಗೂ ಶ್ರೀಮಂತ ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಉಜ್ಬೇಕಿಸ್ತಾನ್ ಇದೀಗ ಭಾರತೀಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಇದಕ್ಕೆ ಪ್ರಮುಖ ಕಾರಣ ಅಲ್ಲಿನ ಕರೆನ್ಸಿಯ ಮೌಲ್ಯ ಭಾರತೀಯ ರೂಪಾಯಿಗೆ ಹೋಲಿಸಿದರೆ ಕಡಿಮೆ ಇರುವುದು. ಭಾರತದ 1 ರೂಪಾಯಿಗೆ ಸುಮಾರು 132 ಉಜ್ಬೇಕಿಸ್ತಾನಿ ಸೋಮ್ ಸಿಗುತ್ತದೆ. ಅಂದರೆ ನಮ್ಮ ₹100 ಅಲ್ಲಿ ಸುಮಾರು 13,200 ಸೋಮ್ ಆಗುತ್ತದೆ. ಹೀಗಾಗಿ ಐಷಾರಾಮಿ ಹೋಟೆಲ್‌ಗಳಲ್ಲಿ ವಾಸ್ತವ್ಯ ಹಾಗೂ ಇತರೆ ಪ್ರಯಾಣ ವೆಚ್ಚಗಳನ್ನು ಕಡಿಮೆ ದರದಲ್ಲಿ ನಿರ್ವಹಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸುಲಭ ವೀಸಾ.. ಕೇವಲ 3 ಗಂಟೆ ಪ್ರಯಾಣ

ಭಾರತದಿಂದ ಉಜ್ಬೇಕಿಸ್ತಾನ್‌ಗೆ ತೆರಳುವುದು ಸಾಕಷ್ಟು ಸುಲಭ. ದೆಹಲಿ ಮತ್ತು ಮುಂಬೈ ನಗರಗಳಿಂದ ಉಜ್ಬೇಕಿಸ್ತಾನ್‌ಗೆ ನೇರ ವಿಮಾನ ಸೇವೆಗಳು ಲಭ್ಯವಿವೆ. ಕೇವಲ 3 ಗಂಟೆಗಳಲ್ಲಿ ಅಲ್ಲಿಗೆ ತಲುಪಬಹುದು. ವೀಸಾಗಾಗಿ ರಾಯಭಾರ ಕಚೇರಿಗಳ ಸುತ್ತಾಡುವ ಅಗತ್ಯವಿಲ್ಲ. ಭಾರತೀಯರಿಗೆ ಸುಲಭವಾದ ಇ-ವೀಸಾ ಸೌಲಭ್ಯ ಕೂಡ ಲಭ್ಯವಿದೆ.

ಆಹಾರಪ್ರಿಯರಿಗೆ ರುಚಿಕರ ಖಾದ್ಯಗಳು

ಉಜ್ಬೇಕಿಸ್ತಾನ್‌ನ ಸಾಂಪ್ರದಾಯಿಕ ಆಹಾರಗಳಿಗೆ ವಿಶ್ವಾದ್ಯಂತ ಉತ್ತಮ ಮನ್ನಣೆ ಇದೆ. ವಿಶೇಷವಾಗಿ ಇಲ್ಲಿನ ಪುಲಾವ್ ಅತ್ಯಂತ ಪ್ರಸಿದ್ಧ. ಇದರ ಜೊತೆಗೆ ವಿವಿಧ ಬಗೆಯ ನಾನ್‌, ರೊಟ್ಟಿಗಳು ಹಾಗೂ ರುಚಿಕರ ಮಾಂಸಾಹಾರಿ ಖಾದ್ಯಗಳು ದೊರೆಯುತ್ತವೆ. ಭಾರತಕ್ಕೆ ಇರುವ ದೀರ್ಘಕಾಲದ ಸಾಂಸ್ಕೃತಿಕ ಸಂಬಂಧದ ಕಾರಣ ಸಸ್ಯಾಹಾರ ಪ್ರಿಯರಿಗೂ ಸೂಕ್ತ ಆಹಾರ ಆಯ್ಕೆಗಳು ಸುಲಭವಾಗಿ ಲಭ್ಯವಾಗುತ್ತವೆ.

ತಪ್ಪದೇ ನೋಡಬೇಕಾದ ನೀಲಿ ಗುಮ್ಮಟಗಳ ನಗರಗಳು

ಸಮರ್‌ಕಂಡ್ ಮತ್ತು ಬುಖಾರಾ ನಗರಗಳಲ್ಲಿರುವ ನೀಲಿ ಬಣ್ಣದ ಗುಮ್ಮಟಗಳನ್ನು ಹೊಂದಿರುವ ಐತಿಹಾಸಿಕ ಕಟ್ಟಡಗಳು ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತವೆ. ಅಂತರರಾಷ್ಟ್ರೀಯ ಮಟ್ಟದ ಐಷಾರಾಮಿ ಪ್ರವಾಸದ ಅನುಭವವನ್ನು ಕಡಿಮೆ ಬಜೆಟ್‌ನಲ್ಲಿ ಪಡೆಯಲು ಬಯಸುವ ಭಾರತೀಯ ಪ್ರವಾಸಿಗರಿಗೆ ಉಜ್ಬೇಕಿಸ್ತಾನ್ ಉತ್ತಮ ಪ್ರವಾಸಿ ತಾಣ ಎಂದು ಹೇಳಬಹುದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular