HomeEntertainmentಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದ್ದ ಅಮಿತಾಬ್ ಬಚ್ಚನ್, ಅನುಷ್ಕಾ ಶರ್ಮಾಗೆ ಬಿತ್ತು ದಂಡ.....!

ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದ್ದ ಅಮಿತಾಬ್ ಬಚ್ಚನ್, ಅನುಷ್ಕಾ ಶರ್ಮಾಗೆ ಬಿತ್ತು ದಂಡ…..!

ಹೆಲ್ಮೆಟ್ ಧರಿಸದೇ ನಟ ಅಮಿತಾಬ್ ಬಚ್ಚನ್ ಮತ್ತು ನಟಿ ಅನುಷ್ಕಾ ಶರ್ಮಾಗೆ ಲಿಫ್ಟ್ ನೀಡಿದ ಬೈಕ್ ಸವಾರರಿಗೆ ಮುಂಬೈ ಪೊಲೀಸರು ದಂಡ ವಿಧಿಸಿದ್ದಾರೆ.
ಮುಂಬೈ ರಸ್ತೆಗಳಲ್ಲಿ ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಿದ್ದಕ್ಕಾಗಿ ಅಮಿತಾಬ್ ಬಚ್ಚನ್ ಮತ್ತು ಅನುಷ್ಕಾ ಶರ್ಮಾ ಇಬ್ಬರಿಗೂ ತಮ್ಮ ಸವಾರರ ಮೂಲಕ ದಂಡ ವಿಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎರಡು ಪ್ರತ್ಯೇಕ ಘಟನೆಗಳಲ್ಲಿ ಬೈಕ್ ಸವಾರರು ಹೆಲ್ಮೆಟ್ ಕಡ್ಡಾಯ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆದ ನಂತರ ದಂಡ ವಿಧಿಸಲಾಗಿದೆ ಎಂದು ಅವರು ಹೇಳಿದರು. ಮುಂಬೈ ಟ್ರಾಫಿಕ್ ಪೊಲೀಸರು ಮಂಗಳವಾರ ಎರಡೂ ವಾಹನಗಳ ಸವಾರರ ವಿರುದ್ಧ ಹೊರಡಿಸಲಾದ ಚಲನ್‌ಗಳ ಪ್ರತಿಗಳನ್ನು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ನಟಿ ಅನುಷ್ಕಾ ಶರ್ಮಾ ಇತ್ತೀಚೆಗೆ ಹೆಲ್ಮೆಟ್ ಧರಿಸದೆ ಬೈಕ್ ನಲ್ಲಿ ಹಿಂಬದಿ ಸವಾರಿ ಮಾಡಿದ್ದರು. ಟ್ರಾಫಿಕ್ ನಿಂದ ತಪ್ಪಿಸಿಕೊಂಡು ಶೂಟಿಂಗ್ ಸ್ಪಾಟ್ ಗೆ ತೆರಳಲು ಅಮಿತಾಬ್ ಬಚ್ಚನ್ ಬೈಕ್ ಸವಾರರೊಬ್ಬರ ಸಹಾಯ ಪಡೆದಿದ್ದರು. ಈ ವೇಳೆ ಬೈಕ್ ಸವಾರರಾಗಲೀ , ಹಿಂಬದಿ ಕುಳಿತಿದ್ದವರಾಗಲೀ ಹೆಲ್ಮೆಟ್ ಧರಿಸಿರಲಿಲ್ಲ. ನೆಟಿಜನ್‌ಗಳು ಇದನ್ನು ಟೀಕಿಸಿದ್ದರು. ಕೆಲವರು ಪೊಲೀಸರ ಟ್ವಿಟರ್ ಹ್ಯಾಂಡಲ್‌ನಲ್ಲಿ ಕ್ಲಿಪ್‌ಗಳನ್ನು ಟ್ಯಾಗ್ ಮಾಡುವ ಮೂಲಕ ಮುಂಬೈ ಪೊಲೀಸರ ಗಮನಕ್ಕೆ ತಂದಿದ್ದರು. ಇದನ್ನು ಗಮನಿಸಿದ ಪೊಲೀಸರು ವಾಹನ ಸವಾರನ ವಿರುದ್ಧ 10,500 ರೂ ದಂಡದ ಜೊತೆಗೆ ಚಲನ್ ಜಾರಿಗೊಳಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. “ಚಾಲಕನಿಗೆ ಸೆಕ್ಷನ್ 129/194(ಡಿ), ಸೆಕ್ಷನ್ 5/180 ಮತ್ತು ಸೆಕ್ಷನ್ 3(1)181 ಎಂವಿ ಆಕ್ಟ್ ಅಡಿಯಲ್ಲಿ 10500 ರೂ. ದಂಡದೊಂದಿಗೆ ಚಾಲಕನಿಗೆ ಚಲನ್ ನೀಡಲಾಗಿದೆ ಮತ್ತು ಅಪರಾಧಿಯಿಂದ ಪಾವತಿಸಲಾಗಿದೆ” ಎಂದು ಮುಂಬೈ ಟ್ರಾಫಿಕ್ ಪೊಲೀಸರು ಟ್ವೀಟ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular