HomeKarnatakaಹೆಜ್ಜೇನು ದಾಳಿಗೆ ಕೋಟ್ಯಾಂತರ ರೂಪಾಯಿ ಮೌಲ್ಯದ ಎರಡು ಕುದುರೆಗಳು ಸಾವು

ಹೆಜ್ಜೇನು ದಾಳಿಗೆ ಕೋಟ್ಯಾಂತರ ರೂಪಾಯಿ ಮೌಲ್ಯದ ಎರಡು ಕುದುರೆಗಳು ಸಾವು

ಹೆಜ್ಜೇನು ದಾಳಿಗೆ ಕೋಟ್ಯಾಂತರ ರೂಪಾಯಿ ಮೌಲ್ಯದ ಎರಡು ಕುದುರೆಗಳು ಸಾವನ್ನಪ್ಪಿರುವ ಘಟನೆ ಕುಣಿಗಲ್ ಸ್ಟಡ್ ಫಾರಂನಲ್ಲಿ ನಡೆದಿದೆ. 10 ಹಾಗೂ 15 ವರ್ಷದ ಈ ಎರಡು ಕುದುರೆಗಳ ಮೇಲೆ ಗುರುವಾರದಂದು ಹೆಜ್ಜೇನುಗಳು ದಾಳಿ ನಡೆಸಿದ್ದವು.

ಇದರ ಪರಿಣಾಮ ಐರ್ಲೆಂಡಿನಿಂದ ತರಿಸಿದ್ದ 10 ವರ್ಷದ ಕುದುರೆ ಹಾಗೂ ಅಮೇರಿಕಾದಿಂದ ತರಿಸಲಾಗಿದ್ದ 15 ವರ್ಷದ ಕುದುರೆ ತೀವ್ರವಾಗಿ ಗಾಯಗೊಂಡಿದ್ದವು. ಪಶುವೈದ್ಯರು ಚಿಕಿತ್ಸೆ ನೀಡಿದರಾದರು ಯಾವುದೇ ಪ್ರಯೋಜನವಾಗಿಲ್ಲ.

ಒಂದು ಕುದುರೆ ಗುರುವಾರ ರಾತ್ರಿಯೇ ಪ್ರಾಣ ಬಿಟ್ಟಿದ್ದರೆ ಮತ್ತೊಂದು ಕುದುರೆ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದಿದೆ. ಈ ಎರಡೂ ಕುದುರೆಗಳನ್ನು ಸಂತಾನೋತ್ಪತ್ತಿಗಾಗಿ ತರಿಸಿಕೊಳ್ಳಲಾಗಿತ್ತು ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇವುಗಳ ಮೌಲ್ಯ ಕೋಟ್ಯಾಂತರ ರೂಪಾಯಿಗಳಾಗಿದ್ದರ ಜೊತೆಗೆ ನಾನಾ ರೇಸ್ ಗಳಲ್ಲಿ ಭಾಗವಹಿಸಿದ್ದ ಇವುಗಳು ಅದರಲ್ಲಿ ಗೆದ್ದು ತಮ್ಮ ಮಾಲೀಕರಿಗೆ ಕೋಟ್ಯಾಂತರ ರೂಪಾಯಿ ಗಳಿಸಿ ಕೊಟ್ಟಿದ್ದವು.

For Latest News Updates, Join Our Whatsapp Community🚩
RELATED ARTICLES

Most Popular