HomeKarnatakaಹಾವು ಕಡಿತದಿಂದ ಸಾವಿಗೀಡಾದ ಜನಪದ ಕಲಾವಿದೆ ಸಂಗಿ ಭರ್ಮಮ್ಮ

ಹಾವು ಕಡಿತದಿಂದ ಸಾವಿಗೀಡಾದ ಜನಪದ ಕಲಾವಿದೆ ಸಂಗಿ ಭರ್ಮಮ್ಮ

ವಿಷಪೂರಿತ ಹಾವು ಕಚ್ಚಿದ ಪರಿಣಾಮ ಜನಪದ ಕಲಾವಿದೆ ಸಂಗಿ ಭರ್ಮಮ್ಮ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ ಆನಂದಪುರ ಸಮೀಪ ನಡೆದಿದೆ.

ಕಣ್ಣೂರು ಗ್ರಾಮದ 80 ವರ್ಷದ ಸಂಗಿ ಭರ್ಮಮ್ಮ ಮಂಗಳವಾರದಂದು ಹೊಲಕ್ಕೆ ಹೋದ ಸಂದರ್ಭದಲ್ಲಿ ಹಾವು ಕಡಿತಕ್ಕೊಳಗಾಗಿ ಮೃತಪಟ್ಟಿದ್ದಾರೆ.

ಸೋಬಾನೆ ಪದ ಮೊದಲಾದ ಜನಪದ ಹಾಡುಗಳ ಕಲಾವಿದರಾಗಿದ್ದ ಅವರು, ಯುವ ಪೀಳಿಗೆಗೆ ತರಬೇತಿ ಸಹ ನೀಡುತ್ತಿದ್ದರು. ಭರ್ಮಮ್ಮ ಅವರ ನಿಧನಕ್ಕೆ ಹಲವರು ಶೋಕ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular