HomeBusinessಗಗನಕ್ಕೇರಿದ ಅಕ್ಕಿ ದರ: ಜನ ಸಾಮಾನ್ಯರು ತತ್ತರ: ಕರಾವಳಿ ಜನರ ಪ್ರಮುಖ ಆಹಾರ ಕುಚ್ಚಲಕ್ಕಿ ದರ...

ಗಗನಕ್ಕೇರಿದ ಅಕ್ಕಿ ದರ: ಜನ ಸಾಮಾನ್ಯರು ತತ್ತರ: ಕರಾವಳಿ ಜನರ ಪ್ರಮುಖ ಆಹಾರ ಕುಚ್ಚಲಕ್ಕಿ ದರ ಕ್ವಿಂಟಾಲ್ ಗೆ 1000 ರೂ. ಏರಿಕೆ

ಕರಾವಳಿ ಪ್ರದೇಶದ ಜನರ ಪ್ರಮುಖ ಆಹಾರವಾದ ಕುಚ್ಚಲಕ್ಕಿ ದರ ಬಾರಿ ಏರಿಕೆ ಕಂಡಿದ್ದು, ಜನಸಾಮಾನ್ಯರು ತತ್ತರಿಸಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಒಂದು ಕ್ವಿಂಟಾಲ್ ಕುಚ್ಚಲಕ್ಕಿ ದರ 1000 ರೂ.ನಷ್ಟು ಹೆಚ್ಚಳವಾಗಿದೆ.

2022ರ ಡಿಸೆಂಬರ್ ನಲ್ಲಿ ಒಂದು ಕ್ವಿಂಟಾಲ್ ಕುಚ್ಚಲಕ್ಕಿ ದರ 3200 ರೂ.ನಿಂದ 3300 ರೂ.ವರೆಗೆ ಇತ್ತು. 2023ರ ಮಾರ್ಚ್ -ಏಪ್ರಿಲ್ ನಲ್ಲಿ ಭಾರಿ ಏರಿಕೆ ಖಂಡ ಕುಚಲಕ್ಕಿ ದರ ಕ್ವಿಂಟಾಲ್ ಗೆ 4,200 ರೂ.ವರೆಗೂ ತಲುಪಿದೆ. 1000 ರೂ.ನಷ್ಟು ದರ ಏರಿಕೆ ಕಂಡಿದ್ದು, ರಾವಳಿ ಭಾಗದ ಜನರಿಗೆ ತತ್ತರಿಸಿ ಹೋಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರಾವಳಿ ಭಾಗದಲ್ಲಿ ದೈನಂದಿನ ಊಟಕ್ಕೆ ಹೆಚ್ಚಾಗಿ ಕುಚ್ಚಲಕ್ಕಿ ಬಳಸುತ್ತಾರೆ. ಕ್ವಿಂಟಾಲ್ ಗೆ 1 ಸಾವಿರ ರೂ.ನಷ್ಟು ಬೆಲೆ ಏರಿಕೆಯಾಗಿರುವುದು ಜನಸಾಮಾನ್ಯರಿಗೆ ಸಂಕಷ್ಟ ತಂದಿಟ್ಟಿದೆ. ಸರ್ಕಾರ ಅಕ್ಕಿ ಬೆಲೆ ನಿಯಂತ್ರಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಜನಸಾಮಾನ್ಯರು ಒತ್ತಾಯಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular