HomeLifestyleಹಲ್ಲು ನೋವಿನಿಂದ ಬಳಲುತ್ತಿದ್ದೀರಾ ? ಹಾಗಾದ್ರೆ ಈ ಮನೆಮದ್ದು ಪ್ರಯತ್ನಿಸಿ

ಹಲ್ಲು ನೋವಿನಿಂದ ಬಳಲುತ್ತಿದ್ದೀರಾ ? ಹಾಗಾದ್ರೆ ಈ ಮನೆಮದ್ದು ಪ್ರಯತ್ನಿಸಿ

ಇತ್ತೀಚಿನ ಜೀವನಶೈಲಿಯಿಂದಾಗಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಹಲ್ಲು ನೋವಿನ ಸಮಸ್ಯೆ ಇರುವುದು ಸಾಮಾನ್ಯವಾಗಿದೆ. ನಿಮಗೂ ಆಗಾಗ ಬರುವ ಹಲ್ಲುನೋವಿನಿಂದ ಬೇಸತ್ತಿದ್ದೀರಾ ? ಡಾಕ್ಟರ್ ಬಳಿ ಹೋದ್ರು, ಯಾವ ಮಾತ್ರೆ ತಗೊಂಡ್ರು ಸರಿ ಹೋಗಿಲ್ವಾ? ಹಾಗಿದ್ರೆ ಈ ಮನೆಮದ್ದು ಮಾಡಿ ಶೀಘ್ರ ಪರಿಹಾರ ಪಡೆಯಿರಿ.

ಹಲ್ಲು ಹುಳುಕಿನಿಂದ ಹಲ್ಲುನೋವು ಬರುತ್ತಿದ್ದರೆ ಈ ರೀತಿ ಮಾಡಿ

ಮೂರು ಎಸಳು ಪುದೀನಾ ಎಲೆ, ಉಪ್ಪು- ಚಿಟಿಕೆ, ಬೆಳ್ಳುಳ್ಳಿ ಎಸಳು-1 ಹಾಗೂ ಲವಂಗ-1. ಇಷ್ಟನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿ. ಬಳಿಕ ಅದನ್ನು ಉಂಡೆ ರೀತಿ ಮಾಡಿ ನೋವಿರುವ ಜಾಗದಲ್ಲಿಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ವಲ್ಪ ಉರಿ ಉರಿ ಎಂದೆನಿಸಿ ಹಿಂಸೆಯಾಗಬಹುದು. ಆದರೆ, 5 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು. ಬಳಿಕ 15 ನಿಮಿಷದವರೆಗೆ ನೀರನ್ನು ತಾಗಿಸಬೇಡಿ. ಶೀಘ್ರ ನೋವು ಕಡಿಮೆಯಾಗಿ, ನಿರಾಳವಾಗುತ್ತದೆ. ನೀವೊಮ್ಮೆ ಪ್ರಯತ್ನಿಸಿ, ಖಂಡಿತಾ ನಿಮ್ಮ ಹಲ್ಲು ನೋವಿನ ಸಮಸ್ಯೆಗೆ ಮುಕ್ತಿ ಸಿಗುತ್ತದೆ.

ವಸಡು ನೋವಿನ ಸಮಸ್ಯೆಗಾಗಿ ಈ ಮನೆಮದ್ದು ಪ್ರಯತ್ನಿಸಿ

ಒಂದು ಬೆಳ್ಳುಳ್ಳಿ, ಚಿಟಿಕೆ ಉಪ್ಪು (ಕಲ್ಲುಪ್ಪು ಬೇಕಿದ್ದರೂ ಸೇರಿಸಬಹುದು) ಸೇರಿಸಿ ಚೆನ್ನಾಗಿ ಜಜ್ಜಿ. ಬಳಿಕ ಇದನ್ನು ನೋವಿರುವ ವಸಡಿಗೆ ಹಚ್ಚಿ 5 ನಿಮಿಷಗಳ ಕಾಲ ಹಾಗೆ ಬಿಡಿ. ಇದು ಕೂಡ ನಿಮಗೆ ಉರಿಯಾಗಿ ಕಿರಿಕಿರಿ ಎಂದೆನಿಸುತ್ತದೆ. ಆದರೆ, ಕೆಲವೇ ಹೊತ್ತಲ್ಲಿ ನೋವು ಶಮನವಾಗಿ ಶೀಘ್ರ ಪರಿಹಾರ ದೊರಕುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular