HomeLifestyleಸಾವಿನ ಕ್ಷಣದಲ್ಲಿ ಮನುಷ್ಯರನ್ನು ಕಾಡುತ್ತೆ ಇಂಥಾ ವಿಷಾದ.…!

ಸಾವಿನ ಕ್ಷಣದಲ್ಲಿ ಮನುಷ್ಯರನ್ನು ಕಾಡುತ್ತೆ ಇಂಥಾ ವಿಷಾದ.…!

ಹುಟ್ಟು ಮತ್ತು ಸಾವು ಯಾವುದೂ ನಮ್ಮ ಕೈಯ್ಯಲ್ಲಿಲ್ಲ. ಎಲ್ಲವು ವಿಧಿಯಾಟ. ಮನುಷ್ಯ ಜೀವನವನ್ನು ಪೂರ್ಣವಾಗಿ ಬದುಕುತ್ತಾನೆ. ಸಾಯುವಾಗ ಯಾವುದಕ್ಕೂ ವಿಷಾದಿಸಬಾರದು ಎಂದೇ ದೇವರನ್ನು ಕೇಳುತ್ತಾನೆ. ಆದರೆ ಇದು ಸಂಭವಿಸುವುದಿಲ್ಲ.

ಪ್ರತಿಯೊಬ್ಬರೂ ಬದುಕಿನುದ್ದಕ್ಕೂ ಒಂದಲ್ಲ ಒಂದು ತಪ್ಪನ್ನು ಮಾಡಿರುತ್ತಾರೆ. ಕೊನೆಯ ಕ್ಷಣದಲ್ಲಿ ಅಂದರೆ ಸಾವು ಸನಿಹದಲ್ಲಿದ್ದಾಗ ಒಳ್ಳೆಯ ಮತ್ತು ಕೆಟ್ಟ ಕ್ಷಣಗಳು ಕಣ್ಮುಂದೆ ರೀಲ್‌ನಂತೆ ಹಾದು ಹೋಗುತ್ತವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಿಳಿದೋ ತಿಳಿಯದೆಯೋ ಮಾಡಿದ ಆ ತಪ್ಪುಗಳಿಗೆ ವ್ಯಕ್ತಿ ಪಶ್ಚಾತ್ತಾಪ ಪಡುತ್ತಾನೆ. ಸಾಮಾನ್ಯವಾಗಿ ಬಹುತೇಕರು ಆಸ್ಪತ್ರೆಗಳಲ್ಲೇ ಕೊನೆಯುಸಿರೆಳೆಯುವುದರಿಂದ ಅಲ್ಲಿರುವ ನರ್ಸ್‌ಗಳ ಬಳಿ ತಮ್ಮ ಜೀವನದ ನ್ಯೂನತೆಗಳ ಬಗ್ಗೆ ಹೇಳಿಕೊಂಡಿರುತ್ತಾರೆ. ಅಮೆರಿಕದ ಲೂಸಿಯಾನದಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿರುವ ಹ್ಯಾಡ್ಲಿ ವ್ಲಾಹೋಸ್, ಅಂತಹ ರೋಗಿಗಳ ವಿಷಾದದ ಕುರಿತು ಪುಸ್ತಕವನ್ನು ಬರೆದಿದ್ದಾರೆ. ಕಳೆದ ಎಂಟು ವರ್ಷಗಳಿಂದ ಹ್ಯಾಡ್ಲಿ ಸಾವಿನಂಚಿನಲ್ಲಿರುವ ರೋಗಿಗಳೊಂದಿಗೆ ಸಮಯ ಕಳೆಯುತ್ತಿದ್ದಾರೆ.

ಅವರ ನಡವಳಿಕೆ ಮತ್ತು ಮಾತುಗಳನ್ನೆಲ್ಲ ಪುಸ್ತಕದಲ್ಲಿ ಬರೆದಿದ್ದಾರೆ. ಸಾಯುವಾಗ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ ಅನ್ನೋದು ಬಹುತೇಕರ ಪಶ್ಚಾತ್ತಾಪದ ನುಡಿ. ಸಾವಿನಂಚಿನಲ್ಲಿರುವ ರೋಗಿಯು ತನ್ನ ಜೀವನದಲ್ಲಿ ಭೌತಿಕ ವಿಷಯಗಳಿಗೆ, ತನ್ನ ಬಾಂಧವ್ಯದ ಬಗ್ಗೆ ಪಶ್ಚಾತ್ತಾಪ ಪಡುತ್ತಾನೆ. ಕೆಲವರು ಬದುಕಿರುವಾಗ ತನ್ನ ಪ್ರೀತಿಪಾತ್ರರಿಗೆ ಅವರ ಬಗೆಗಿರುವ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಾಗಲಿಲ್ಲ ಎಂದು ವಿಷಾದಿಸುತ್ತಾನೆ.

ಎಷ್ಟೋ ಜನರಿಗೆ ತಮ್ಮ ಜೀವನದ ಗುರಿ ಈಡೇರಿಲ್ಲ ಎಂಬ ಕೊರಗು ಕೂಡ ಇರುತ್ತದೆ. ಕೆಲಸಕ್ಕಿಂತ ಕುಟುಂಬಕ್ಕೆ ಆದ್ಯತೆ ನೀಡುವುದು ಮುಖ್ಯ ಎಂದು ಕೊನೆ ಕ್ಷಣದಲ್ಲಿ ಅರಿವಾಗುತ್ತದೆ. ಕೆಲವು ಕೆಲಸಗಳನ್ನು ಇತರರಿಗಾಗಿ ಮಾಡಬಾರದು ತನಗಾಗಿ ಮಾಡಬೇಕು ಅನ್ನೋದು ಇನ್ನೊಂದಷ್ಟು ಮಂದಿಯ ಪಶ್ಚಾತ್ತಾಪದ ನುಡಿ. ಜೀವನದಲ್ಲಿ ಹವ್ಯಾಸ ಮತ್ತು ಆಯ್ಕೆಯ ಮೇಲೆ ಹೆಚ್ಚು ಗಮನಹರಿಸಲು ಸಾಧ್ಯವಾಗಿಲ್ಲ ಅನ್ನೋ ವಿಷಾದ ಅನೇಕರನ್ನು ಕಾಡುತ್ತದೆ.

ಈ ವಿಷಾದಗಳು ನಮ್ಮ ಭವಿಷ್ಯದ ಜೀವನದ ಆದ್ಯತೆಗಳನ್ನು ನಿರ್ಧರಿಸಲು ಅಥವಾ ಬದಲಾಯಿಸಲು ಪ್ರೇರೇಪಿಸುತ್ತವೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನ ಮತ್ತು ಮರಣದಿಂದ ಅನನ್ಯವಾದದ್ದನ್ನು ಕಲಿಸುತ್ತಾನೆ. ಈ ಪಾಠವನ್ನು ಬದುಕಿನಲ್ಲಿ  ಅನ್ವಯಿಸುವ ಮೂಲಕ ಆ ವಿಷಾದವನ್ನು ತಪ್ಪಿಸಬಹುದು.

For Latest News Updates, Join Our Whatsapp Community🚩
RELATED ARTICLES

Most Popular