HomeIndia'ವಿಶ್ವ ಇಡ್ಲಿ ದಿನ' ದಂದೇ ಅಚ್ಚರಿಯ ಮಾಹಿತಿ ಬಹಿರಂಗ....!

‘ವಿಶ್ವ ಇಡ್ಲಿ ದಿನ’ ದಂದೇ ಅಚ್ಚರಿಯ ಮಾಹಿತಿ ಬಹಿರಂಗ….!

ಮಾರ್ಚ್ 30 ರಂದು ‘ವಿಶ್ವ ಇಡ್ಲಿ ದಿನ’ ವನ್ನು ಆಚರಿಸಲಾಗಿದ್ದು, ಇಡ್ಲಿ ಪ್ರಿಯರು ತಮ್ಮ ನೆಚ್ಚಿನ ತಿನಿಸಿನ ಫೋಟೋ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಡ್ಲಿ ಮೇಲಿನ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದಾರೆ.

ಇದರ ಮಧ್ಯೆ ವಿಶ್ವ ಇಡ್ಲಿ ದಿನದಂದೇ ಅಚ್ಚರಿಯ ಮಾಹಿತಿ ಒಂದು ಬಹಿರಂಗವಾಗಿದೆ. ಫುಡ್ ಡೆಲಿವರಿ ಕಂಪನಿ ಸ್ವಿಗ್ಗಿ ಈ ಮಾಹಿತಿ ನೀಡಿದ್ದು, ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ 33 ಕೋಟಿ ಪ್ಲೇಟ್ ಇಡ್ಲಿ ವಿತರಿಸಲಾಗಿದೆಯಂತೆ.

ಮತ್ತೊಂದು ಸ್ವಾರಸ್ಯಕರ ಸಂಗತಿ ಎಂದರೆ ಈ ಪೈಕಿ ಹೈದರಾಬಾದಿನ ಓರ್ವ ವ್ಯಕ್ತಿಯೇ 6 ಲಕ್ಷ ರೂಪಾಯಿ ಮೌಲ್ಯದ ಬರೋಬ್ಬರಿ 8,428 ಪ್ಲೇಟ್ ಇಡ್ಲಿ ಆರ್ಡರ್ ಮಾಡಿದ್ದಾರೆ. ಇಡ್ಲಿ ಆರ್ಡರ್ ಮಾಡುವ ನಗರಗಳ ಟಾಪ್ 3 ಪಟ್ಟಿಯಲ್ಲಿ ಬೆಂಗಳೂರು, ಹೈದರಾಬಾದ್ ಹಾಗೂ ಚೆನ್ನೈ ಇವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular