HomeLifestyleರುಚಿ ರುಚಿಯಾದ ಸಿಂಪಲ್ ಖಾದ್ಯ ಆಲೂ ಜೀರಾ ಫ್ರೈ

ರುಚಿ ರುಚಿಯಾದ ಸಿಂಪಲ್ ಖಾದ್ಯ ಆಲೂ ಜೀರಾ ಫ್ರೈ

ಇದೊಂದು ಸಿಂಪಲ್ ಖಾದ್ಯ. ರೊಟ್ಟಿ ಮತ್ತು ಚಪಾತಿ ಜೊತೆಗೆ ತಿನ್ನಬಹುದು. ಸಖತ್ ಟೇಸ್ಟಿಯಾಗಿರುತ್ತೆ. ಕೇವಲ 10 ನಿಮಿಷಗಳಲ್ಲೇ ಜೀರಾ ಆಲೂ ಫ್ರೈ ಮಾಡಬಹುದು. ಪೂರಿಯ ಜೊತೆಗೆ ತಿಂದ್ರೂ ಟೇಸ್ಟ್ ಚೆನ್ನಾಗಿರುತ್ತದೆ.

ಬೇಕಾಗುವ ಸಾಮಗ್ರಿ : 2 ಚಮಚ ಎಣ್ಣೆ, 1 ಚಮಚ ಜೀರಿಗೆ, ಒಂದು ಇಂಚು ಶುಂಠಿ, 2 ಹಸಿಮೆಣಸು, ಅರ್ಧ ಚಮಚ ಅರಿಶಿನ, ಅರ್ಧ ಚಮಚ ಕೊತ್ತಂಬರಿ ಪುಡಿ, ಕಾಲು ಚಮಚ ಆಮ್ಚೂರ್ ಪೌಡರ್, ಚಿಟಿಕೆ ಇಂಗು, ರುಚಿಗೆ ತಕ್ಕಷ್ಟು ಉಪ್ಪು, 2 ಬೇಯಿಸಿದ ಆಲೂಗಡ್ಡೆ, ಸ್ವಲ್ಪ ನೀರು, ಹೆಚ್ಚಿದ ಕೊತ್ತಂಬರಿ ಸೊಪ್ಪು.

ತಯಾರಿಸುವ ವಿಧಾನ : ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಜೀರಿಗೆ ಹಾಕಿ ಚಟಪಟಾಯಿಸಿ. ಹೆಚ್ಚಿದ ಶುಂಠಿ ಮತ್ತು ಹಸಿಮೆಣಸು ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ. ಉರಿಯನ್ನು ಸಣ್ಣಗೆ ಮಾಡಿ ಅರಿಶಿನ, ಅಚ್ಚಖಾರದ ಪುಡಿ, ಧನಿಯಾ ಪುಡಿ, ಆಮ್ಚೂರ್ ಪೌಡರ್, ಇಂಗು ಮತ್ತು ಉಪ್ಪನ್ನು ಹಾಕಿ. ಮಸಾಲೆ ಬರ್ನ್ ಆಗದಂತೆ ಹುರಿಯಿರಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೇಯಿಸಿ ಸಿಪ್ಪೆ ಸುಲಿದು ಹೆಚ್ಚಿಟ್ಟುಕೊಂಡ ಆಲೂಗಡ್ಡೆಯನ್ನು ಹಾಕಿ. ಆಲೂಗಡ್ಡೆ ಚೂರಾಗದಂತೆ ನಿಧಾನವಾಗಿ ಮಿಕ್ಸ್ ಮಾಡಿ. ನಂತರ 2 ಚಮಚ ನೀರು ಬೆರೆಸಿ. ಸಣ್ಣ ಉರಿಯಲ್ಲಿ 5 ನಿಮಿಷ ಹಾಗೇ ಮುಚ್ಚಿಡಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿದರೆ ಆಲೂ ಜೀರಾ ಫ್ರೈ ಸವಿಯಲು ಸಿದ್ಧ.

For Latest News Updates, Join Our Whatsapp Community🚩
RELATED ARTICLES

Most Popular