HomeCrimeಮೊಬೈಲ್ ಕರೆ ಮೂಲಕ ಯುವತಿಗೆ ಕಿರುಕುಳ; ಆರು ತಿಂಗಳ ಬಳಿಕ ಆರೋಪಿ ಅರೆಸ್ಟ್

ಮೊಬೈಲ್ ಕರೆ ಮೂಲಕ ಯುವತಿಗೆ ಕಿರುಕುಳ; ಆರು ತಿಂಗಳ ಬಳಿಕ ಆರೋಪಿ ಅರೆಸ್ಟ್

ಯುವತಿಯೊಬ್ಬಳಿಗೆ ವಿವಿಧ ಸಂಖ್ಯೆಗಳ ಮೊಬೈಲ್ ನಿಂದ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಮಧ್ಯಪ್ರದೇಶ ಪೊಲೀಸರು ಸೋಮವಾರದಂದು ಬಂಧಿಸಿದ್ದಾರೆ. ದೂರು ದಾಖಲಾದ ಆರು ತಿಂಗಳ ಬಳಿಕ ಈತನ ಬಂಧನವಾಗಿದೆ.

ಇಂದೋರ್ ನ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರು ತಿಂಗಳ ಹಿಂದೆ ಯುವತಿ ಪ್ರಕರಣ ದಾಖಲಿಸಿದ್ದು, ಈ ವಿಷಯ ಗೊತ್ತಾಗುತ್ತಿದ್ದಂತೆ ಆರೋಪಿ ತನ್ನ ಊರು ಒಡಿಶಾದ ರಾಜಘರ್ ಜಿಲ್ಲೆಗೆ ಪರಾರಿಯಾಗಿದ್ದ. ಅಂದಿನಿಂದಲೂ ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು‌.

ಇತ್ತೀಚೆಗೆ ಈತ ವಾಪಸ್ ಇಂದೋರ್ ಗೆ ಬಂದಿದ್ದು, ರೆಸ್ಟೋರೆಂಟ್ ಒಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ಇದರ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಸೋಮವಾರದಂದು ಆತ್ಮರಾಮ್ ಎಂಬ ಹೆಸರಿನ ಈ ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular